ಅರಣ್ಯ ಇಲಾಖೆಯಿಂದ ಬೆಳಗಾಂನಿಂದ ಬೆಂಗಳೂರುವರೆಗೆ ಸೈಕ್ಲೋಥಾನ್ ಆಯೋಜನೆ

Promotion

ಮೈಸೂರು, ಸೆಪ್ಟೆಂಬರ್ 22, 2020 (www.justkannada.in): ಅರಣ್ಯ ಇಲಾಖೆ ವತಿಯಿಂದ ಸೈಕ್ಲೋಥಾನ್ ಆಯೋಜಿಸಲಾಗಿದೆ.

‘ಸೇವ್ ಎಲಿಫ್ಯಾಂಟ್ ಕಾರಿಡಾರ್’ ಹೆಸರಿನಲ್ಲಿ ಅಕ್ಟೋಬರ್ 2ರಿಂದ 5ರವರೆಗೆ ಎರಡು ಮಾರ್ಗಗಳಲ್ಲಿ ಸೈಕ್ಲೋಥಾನ್ ನಡೆಯಲಿದೆ. ಸೈಕ್ಲೋಥಾನ್ ನಲ್ಲಿ ಪಾಲ್ಗೊಳ್ಳುವವರಿಗೆ ಅರಣ್ಯ ಇಲಾಖೆ ಎಲ್ಲ ಅನುಕೂಲಗಳನ್ನು ಮಾಡಿಕೊಡಲಿದೆ.

ಮೊದಲ ಮಾರ್ಗ ಬೆಳಗಾಂನಲ್ಲಿ ಆರಂಭಗೊಂಡು ಬೆಂಗಳೂರಿನಲ್ಲಿ ಸಮಾಪ್ತಿಗೊಂಡರೆ, ಮತ್ತೊಂದು ಮಾರ್ಗ ಮುತ್ತೊಡಿಯಲ್ಲಿ ಆರಂಭವಾಗಿ ಬೆಂಗಳೂರಿನಲ್ಲಿ ಮುಕ್ತಾಯಗೊಳ್ಳಲಿದೆ.

ಪಾಲ್ಗೊಳಲು ಇಚ್ಛಿಸುವವರು ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಭರ್ತಿ ಮಾಡಿ ಸಲ್ಲಿಸಬೇಕು….

https://docs.google.com/forms/d/e/1FAIpQLSeb3MFJAXoNLrdwlqSGYz6lTlS2rNKYDU2nEdXXC_v_6N6gxQ/viewform