ಮೈಸೂರು ವಿವಿಯಿಂದ ನ.13ರಂದು ’ಪ್ರಸ್ತುತ ಸಮಸ್ಯೆಗಳು ಮತ್ತು ಆರ್ಥಿಕ ಅಭಿವೃದ್ಧಿ’’ ಕುರಿತು ರಾಷ್ಟ್ರೀಯ ವೆಬಿನಾರ್

Promotion

ಮೈಸೂರು,ನವೆಂಬರ್,12,2020(www.justkannada.in) : ಮೈಸೂರು ವಿವಿ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗ ಯೋಜನಾ ವೇದಿಕೆ ವತಿಯಿಂದ ನ.13ರಂದು ಸಂಜೆ 5ಗಂಟೆಗೆ ‘’ಪ್ರಸ್ತುತ ಸಮಸ್ಯೆಗಳು ಮತ್ತು ಆರ್ಥಿಕ ಅಭಿವೃದ್ಧಿ’’ಯ ಕುರಿತು ರಾಷ್ಟ್ರೀಯ ವೆಬಿನಾರ್ ಕಾರ್ಯಕ್ರಮವನ್ನು ಆಯೋಜಿಸಿದೆ.kannada-journalist-media-fourth-estate-under-loss

ಕಾರ್ಯಕ್ರಮಕ್ಕೆ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಬೆಂಗಳೂರು ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಯೂನಿವರ್ಸಿಟಿ ಕುಲಪತಿ ಪ್ರೊ.ಎನ್.ಆರ್.ಭಾನುಮೂರ್ತಿ ಅವರು ‘’ಕೋವಿಡ್-19 ಮತ್ತು ಭಾರತದಲ್ಲಿ ಸ್ಥೂಲ ಆರ್ಥಿಕ ನೀತಿ ಪ್ರತಿಕ್ರಿಯೆಗಳು’’ ಕುರಿತು ಮಾತನಾಡಲಿದ್ದಾರೆ.: Current-Issues-Economic-Development-Mysore-About-National-Webinar

ಬೆಂಗಳೂರಿನಲ್ಲಿರುವ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಸಂಸ್ಥೆ ಮಾಜಿ ನಿರ್ದೇಶಕ ಪ್ರೊ.ಆರ್.ಎಸ್.ದೇಶಪಾಂಡೆ ಅವರು ‘’ಹೊಸ ಕೃಷಿ ಕಾಯ್ದೆಯ ಹುಟ್ಟು ಮತ್ತು ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವುದು ವಿಷಯ ಕುರಿತು ಮಾತನಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

English summary…

National Webinar on ‘Current Issues and Economical Development’ by MU on Nov. 13
Mysuru, Nov. 12, 2020 (www.justkannada.in): The Planning Forum of the Department of Economics and Cooperative Studies, University of Mysore, has organized a National Webinar on the topic “Current Issues and Economical Development,” at 5 pm on Nov. 13, 2020.
Prof. K.S. Rangappa, former Vice Chancellor, University of Mysore, Prof. G. Hemanth Kumar, Vice Chancellor, University of Mysore will be the guests.
Prof. N.R. Bhanumurty, Chancellor, Dr. B.R. Ambedkar School of Economics University, Bengaluru, will speak on the topic, “COVID-19 and Macro Economics Policy Responses in India,’ and Prof. R.S. Deshpande will speak on the topic, “Birth of New Agri Act and understanding the Impacts.”

 

key words  : Current-Issues-Economic-Development-Mysore-About-National-Webinar