ಕುತೂಹಲ ಮೂಡಿಸಿದ ನಟಿ ರಾಣಿ ಮುಖರ್ಜಿ ‘ಮರ್ದಾನಿ 2’ ಟೀಸರ್

Promotion

ಬೆಂಗಳೂರು, ನವೆಂಬರ್ 15, 2019 (www.justkannada.in): ನಟಿ ರಾಣಿ ಮುಖರ್ಜಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಮರ್ದಾನಿ 2’. ಈ ಸಿನಿಮಾ ಪೋಸ್ಟರ್, ಟೀಸರ್​ ಹಾಗೂ ಟ್ರೈಲರ್​ನಿಂದಲೇ ಸಖತ್​ ಸದ್ದು ಮಾಡುತ್ತಿದೆ.

ಈ ಹಿಂದೆ ಈ ಸಿನಿಮಾದ ಮೊದಲ ಟ್ರೈಲರ್​ ಬಿಡುಗಡೆಯಾದಾಗ ಸಿನಿ ಪ್ರೇಕ್ಷಕರಲ್ಲಿ ಕೊಂಚ ಕುತೂಹಲ ಮೂಡಿತ್ತು. ಆದರೆ ಈಗ ಇದರ ಎರಡನೇ ಟ್ರೈಲರ್​ ರಿಲೀಸ್​ ಆಗಿದ್ದು, ಸಿನಿ ಪ್ರಿಯರಲ್ಲಿದ್ದ ಕುತೂಹಲವನ್ನು ದುಪ್ಪಟ್ಟು ಮಾಡಿದೆ.

ಕೋಟಾ ನಗರದಲ್ಲಿ ನಡೆದ ಸರಣಿ ಅತ್ಯಾಚಾರ ಪ್ರಕರಣಗಳ ನೈಜ ಘಟನೆಗಳನ್ನು ಆಧಾರಿತ ಸಿನಿಮಾವೇ ಈ ‘ಮರ್ದಾನಿ 2’.