ಮತ್ತೆ ಲಾಕ್ ಡೌನ್ ಆಗುತ್ತಾ ಸಾಂಸ್ಕೃತಿಕ ನಗರಿ ಮೈಸೂರು….?

Promotion

ಮೈಸೂರು,ಜು,13,2020(www.justkannada.in): ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ 7 ದಿನಗಳ ಕಾಲ ಲಾಕ್ ಡೌನ್ ಗೆ ಆದೇಶಿಸಿದ್ದು ಇದೇ ರೀತಿ ಮೈಸೂರು ಸೇರಿ 12 ಜಿಲ್ಲೆಗಳಲ್ಲಿ ಲಾಕ್ ಡೌನ್ ಮಾಡುವ ಸಾಧ್ಯತೆ ಇದೆ.

ಇಂದು ಸಿಎಂ ಬಿಎಸ್ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿ  ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.    ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಮಹಾಮಾರಿ ಅಬ್ಬರಿಸುತ್ತಿದ್ದು ಲಾಕ್ ಲಿಸ್ಟ್ ನಲ್ಲಿರೊ ಹತ್ತು ಜಿಲ್ಲೆಗಳಲ್ಲಿ ಮೈಸೂರು ಒಂದಾಗಿದೆ. ಹೀಗಾಗಿ  ಸಾಂಸ್ಕೃತಿಕ ನಗರಿ ಮತ್ತೆ ಲಾಕ್ ಡೌನ್ ಆಗುತ್ತಾ..? ಎಂಬ ಪ್ರಶ್ನೆ ಮೂಡಿದೆ.cultural-city-mysore-lock-down-again

ಎಲ್ಲಾ ಜಿಲ್ಲೆಗಳ ಜಿಲಾಧಿಕಾರುಗಳೊಂದಿಗೆ ಸಿಎಂ ಬಿಎಸ್ ವೈ ಮಾತುಕತೆ ನಡೆಸಲಿದ್ದು, ಈ ವೇಳೆ ಮೈಸೂರಿನ ಕೊರೊನಾ ಸ್ಥಿತಿಗತಿ ಬಗ್ಗೆ ಸಿಎಂಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ವಿವರ ನೀಡಲಿದ್ದಾರೆ.  ಮೈಸೂರಿನಲ್ಲಿ ಕೊರೊನ ನಿಯಂತ್ರಣ ಹಾಗೂ ಸದ್ಯದ ಸ್ಥಿತಿಗತಿಗಳ  ಬಗ್ಗೆ ತಿಳಿಸಲಿದ್ದಾರೆ.

Key words: cultural city -Mysore –lock down -again.