18 ವಲಸೆ ಶಾಸಕರನ್ನ ವೇಶ್ಯೆರಿಗೆ ಹೋಲಿಸಿದ ಬಿ.ಕೆ ಹರಿಪ್ರಸಾದ್ ಗೆ ಸಿ.ಟಿ ರವಿ ತಿರುಗೇಟು.

BL Santosh - selection -candidates - Rajya Sabha-minister-CT Ravi.
Promotion

ಬೆಂಗಳೂರು,ಜನವರಿ,17,2023(www.justkannada.in):  ವೇಶ್ಯೆಯರಂತೆ ಕೆಲವರು ಶಾಸಕ ಸ್ಥಾನವನ್ನ ಮಾರಿಕೊಂಡು ಬಿಜೆಪಿಗೆ ಹೋಗಿ ಸರ್ಕಾರ ರಚಿಸಿದ್ದರು ಎಂದು ಹೇಳಿಕೆ ನೀಡಿದ್ಧ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಸಿ.ಟಿ ರವಿ, ಅರ್ಧದಷ್ಟು ಕಾಂಗ್ರೆಸ್ಸಿಗರು ಮೂಲ ಕಾಂಗ್ರೆಸ್ಸಿಗರಲ್ಲ.  ಅವರಿಗೆಲ್ಲಾ ಇವರು ಏನು ಹೇಳಲು ಬಯಸುತ್ತಾರೆ. ಹರಿಪ್ರಸಾದ್ ಟಾರ್ಗೆಟ್ 18 ಜನ ಶಾಸಕರಲ್ಲ ಬದಲಾಗಿ ಸಿದ್ದರಾಮಯ್ಯರೇ ಇವರಿಗೆ ಟಾರ್ಗೆಟ್ ಆಗಬೇಕು.  ಇದೇ ಪದ ಅವರ ಪಕ್ಷದ ಲೀಡರ್ ಗೂ  ಅನ್ವಯವಾಗುತ್ತಾ..? ಸಿದ್ದರಾಮಯ್ಯರನ್ನ ಟಾರ್ಗೆಟ್ ಮಾಡಲು ಇಂತಹ ಹೇಳಿಕೆ ನೀಡಿದ್ದಾರೆ.  ಸಿದ್ಧರಾಮಯ್ಯ ಅವರು ಕೂಡ ಜನತಾ ಪರಿವಾರ ಬಿಟ್ಟು ಬಂದವರಲ್ಲವೇ ..? ಎಂದು ಟಾಂಗ್ ನೀಡಿದರು.BL Santosh - selection -candidates - Rajya Sabha-minister-CT Ravi.

ರಸ್ತೆ ಚರಂಡಿಯಂತಹ ಚಿಕ್ಕ ವಿಚಾರ ಬಿಟ್ಟುಬಿಡಿ ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆಯನ್ನ ಸಮರ್ಥಿಸಿಕೊಂಡ ಶಾಸಕ ಸಿಟಿ ರವಿ, ರಾಜ್ಯದ ಅಭಿವೃದ್ದಿ ಜತೆಗೆ ಲವ್ ಜಿಹಾದ್ ನಿಯಂತ್ರಣ ಆಗಬೇಕು ಎಂದರು.

Key words: CT Ravi -tong- BK Hariprasad -comparing -18 -MLAs – prostitutes.