Promotion
ಬೆಂಗಳೂರು,ಡಿಸೆಂಬರ್,1,2020(www.justkannada.in): ಲವ್ ಜಿಹಾದ್ ಕಾಯ್ದೆ ಜಾರಿಗೆ ತರಲು ಚಿಂತನೆ ನಡೆಸಿರುವುದು ಮೂರ್ಖತನ. ಹಿಂದೂ ಮುಸ್ಲೀಂ ಕ್ರಾಸ್ ಆಗಿ ಹುಟ್ಟಿದ ಸಾಕಷ್ಟು ಜನರಿದ್ದಾರೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ಧರಾಮಯ್ಯಗೆ ಟಾಂಗ್ ನೀಡಿರುವ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್ ಈಶ್ವರಪ್ಪ, ಕ್ರಾಸ್ ಬ್ರೀಡ್ ಬಗ್ಗೆ ಸಿದ್ಧರಾಮಯ್ಯಗೆ ಆಸಕ್ತಿ. ಕಾಂಗ್ರೆಸ್ ನವರದ್ಧು ಕ್ರಾಸ್ ಬ್ರೀಡ್ ಸಂತತಿ ಎಂದು ಲೇವಡಿ ಮಾಡಿದ್ದಾರೆ.
ಸಿದ್ಧರಾಮಯ್ಯ ಹೇಳಿಕೆ ಬಗ್ಗೆ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಲವ್ ಜಿಹಾದ್ ಬ್ಯಾನ್ ಮಾಡಲು ಚಿಂತನೆ ಇದೆ. ಸಿದ್ದರಾಮಯ್ಯ ಹೇಳಿಕೆ ಮೂರ್ಖತನದ್ದು. ಕ್ರಾಸ್ ಬ್ರೀಡ್ ಬಗ್ಗೆ ಸಿದ್ಧರಾಮಯ್ಯಗೆ ಆಸಕ್ತಿ. ಕಾಂಗ್ರೆಸ್ ನವರದ್ಧು ಕ್ರಾಸ್ ಬ್ರೀಡ್ ಸಂತತಿ. ಕೂಡಲೇ ಸಿದ್ದರಾಮಯ್ಯ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
Key words: Cross breed -descendants –Congress-Minister- KS Eshwarappa