ನೆರೆ ಪರಿಹಾರ ವಿಳಂಬಕ್ಕೆ ಟೀಕೆ ವಿಚಾರ: ಪ್ರಧಾನಿ ಮೋದಿ ಬಗ್ಗೆ ಮಾತನಾಡುವವರು ಆಕಾಶಕ್ಕೆ ಉಗುಳಿದಂತೆ ಎಂದ ಸಂಸದ ಪ್ರತಾಪ್ ಸಿಂಹ ಕಿಡಿ….

ಮೈಸೂರು,ಅ,2,2019(www.justkannada.in):  ಕರ್ನಾಟಕದ ಪ್ರವಾಹದ  ಬಗ್ಗೆ ಪ್ರಧಾನಿ ಮೋದಿ ಮೌನ ವಿಚಾರ ಕುರಿತು ಟೀಕಿಸುತ್ತಿರುವವರಿಗೆ ಮೈಸೂರು –ಕೊಡಗು ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ.

ಮೋದಿ ಬಗ್ಗೆ ಮಾತನಾಡುವವರು ಆಕಾಶಕ್ಕೆ ಉಗುಳಿದಂತೆ. ಆಕಾಶಕ್ಕೆ ಉಗುಳಿದ್ರೆ ಅದು ಅವರ ಮೇಲೆಯೇ ಬಿಳುತ್ತೆ ಎಂದು ಪ್ರಧಾನಿ ಮೋದಿ ಟೀಕಾಕಾರರಿಗೆ ಸಂಸದ ಪ್ರತಾಪ್‌ಸಿಂಹ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಮೊದಲು ರಾಜ್ಯದ ಸಂಸದರ ಬಗ್ಗೆ ಮಾತನಾಡುತ್ತಿದ್ದರು. ಈಗ ಮೋದಿ ಬಗ್ಗೆ ಮಾತನಾಡುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನ ಇಲ್ಲ. ಕಳೆದ ಬಾರಿ 17 ಸಂಸದರು ಇದ್ದರು. ಆ ವೇಳೆ ಕಾವೇರಿ,ಮಹಾದಾಯಿ ವಿಚಾರದಲ್ಲಿ  ಏನ್ ಮಾಡಿದ್ರು ಇವರಿಗೆ ಮಾತನಾಡಲು ಧೈರ್ಯ ಇಲ್ಲವಾ ಅಂದರು. ಈ ಬಾರಿ 17 ಜೊತೆಗೆ ಇನ್ನು 8 ಮಂದಿ ಹೆಚ್ಚಾಗಿ ಬಿಜೆಪಿ ಸಂಸದರನ್ನ ಜನ ಆಯ್ಕೆ‌ ಮಾಡಿದ್ದಾರೆ. ಅದರ ಅರ್ಥ ಬಿಜೆಪಿ ಸಂಸದರು ಕೆಲಸ ಮಾಡಿದ್ದಾರೆ ಅಂತಾನೇ ಅರ್ಥ ಎಂದು ಹೇಳಿದರು.

ಮೋದಿ ಟ್ವಿಟ್ ಮಾಡಲಿಲ್ಲ ಅಂತಾರೆ. ಆದ್ರೆ ಮೋದಿ ಅಮಿತ್ ಶಾರನ್ನೇ ಕಳುಹಿಸಿದ್ದು ನಿಮಗೆ ಕಾಣೋಲ್ಲವೇ. ಮೋದಿ ಬಗ್ಗೆ ಮಾತನಾಡೋಕೆ ಸಂಸದರಿಗೆ ಧೈರ್ಯ ಇಲ್ಲವಾ ಅಂತಾರೆ. ಕೆಲಸ ಮಾಡೋಕೆ ಧೈರ್ಯ ಯಾಕೇ ಬೇಕು. ಪದಬಳಕೆ, ಶಬ್ದ ಬಳಕೆ ಮಾಡಿ ಟೀಕಿಸೋದ್ರಿಂದ ಯಾವುದೇ ಪ್ರಯೋಜನೆ ಇಲ್ಲ‌ ಎಂದು ಪ್ರತಾಪ್ ಸಿಂಹ ತಿಳಿಸಿದರು.

ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಟ್ವಿಟ್ ಗೆ ತಿರುಗೇಟು

ರಾಜ್ಯದ ಪ್ರವಾಹಕ್ಕೆ  ಕೇಂದ್ರದಿಂದ  ಪರಿಹಾರ ನೀಡದ ವಿಚಾರ ಕುರಿತು ವಾಗ್ಮಿ ಚಕ್ರವರ್ತಿ  ಸೂಲಿಬೆಲೆ ಟ್ವಿಟ್  ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಯಾರು ಕಿಸೆಯಿಂದ ಪರಿಹಾರ‌ ಕೊಡೋಕೆ‌ ಆಗೋಲ್ಲ. ಪ್ರವಾಹಕ್ಕೆ ಪರಿಹಾರ ನೀಡಬೇಕಾದ್ರೆ ಅದರದ್ದೇ ಆದ ಪ್ರೋಸೆಸ್  ಇದೆ,  ಅದನ್ನ  ಮಾಡಿಯೇ  ಪರಿಹಾರ ಕೊಡಬೇಕಾಗತ್ತೆ,  ಸುಮ್ಮನೆ ಏನು ತಿಳಿಯದೆ  ಮಾತನಾಡುವವರು ರಾಜ್ಯದ  l4 ಜಿಲ್ಲೆಗಳಿಗೂ  ಭೇಟಿ ನೀಡಲಿ, ಯಾರನ್ನಾದರೂ ಕೇಳಲಿ  ಪ್ರತಿ ಮನೆಗೂ 10 ಸಾವಿರ ನೀಡಿದ್ದೇವೆ… ಯಾವುದಾದರು  ಒಂದು  ಮನೆಗೆ ತಲುಪಿಲ್ಲ ಎಂದು ನೋಡಿ  ಹೇಳಲಿ. ಸುಮ್ಮನೆ ಎಲ್ಲೋ ಕುಳಿತು ಮಾತನಾಡೋದು ಸರಿಯಲ್ಲ, ಎನ್. ಡಿ ಆರ್. ಎಫ್ ನ ಕೆಲಸ ಏನು ಅಂತ  ತಿಳಿದುಕೊಳ್ಳಲಿ ಎಂದು  ಟಾಂಗ್ ನೀಡಿದರು.

Key words: Criticism – delay flood-compensation-Prime Minister -Narendra Modi – MP Pratap simha