‘ಅರ್ಜುನ್ ರೆಡ್ಡಿ’ ನಟಿ ಶಾಲಿನಿ ಪಾಂಡೆ ವಿರುದ್ಧ ಕ್ರಿಮಿನಲ್ ಕೇಸ್

Promotion

ಬೆಂಗಳೂರು, ಡಿಸೆಂಬರ್ 2, 2019 (www.justkannada.in): ವಿಜಯ್ ದೇವರಕೊಂಡ ಅಭಿನಯದ ‘ಅರ್ಜುನ್ ರೆಡ್ಡಿ ನಟಿ ಶಾಲಿನಿ ಪಾಂಡೆ ವಿರುದ್ಧ ದೂರು ದಾಖಲಾಗಿದೆ.

ಬಾಲಿವುಡ್ ಸ್ಟಾರ್ ನಟನ ಚಿತ್ರಕ್ಕೆ ನಾಯಕಿಯಾದ ‘ಅರ್ಜುನ್ ರೆಡ್ಡಿ’ ನಟಿ ಶಾಲಿನಿ ವಿರುದ್ಧ ಈಗ ಕ್ರಿಮಿನಲ್ ಕೇಸ್ ದಾಖಲಾಗಿದೆ ಎಂಬ ವಿಚಾರ ಬಹಿರಂಗವಾಗಿದೆ.

ವಿಜಯ್ ಅಂಟೋನಿ ಮತ್ತು ಅರುಣ್ ವಿಜಯ್ ನಾಯಕರಾಗಿ ನಟಿಸುತ್ತಿರುವ ”ಅಗ್ನಿ ಸಿರಗುಗಲ್” ಚಿತ್ರದಲ್ಲಿ ಶಾಲಿನಿ ನಾಯಕಿಯಾಗಿ ನಟಿಸುತ್ತಿದ್ದಾರೆ. 27 ದಿನಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ನಟಿ ನಂತರ ಶೂಟಿಂಗ್ ಗೆ ಬರ್ತಿಲ್ಲ ಎಂದು ಚಿತ್ರತಂಡ ಆಕ್ರೋಶ ಹೊರಹಾಕಿದೆ. ಈ ಕುರಿತು ಕ್ರಿಮಿನಲ್ ಕೇಸು ದಾಖಲು ಮಾಡಿದೆ.