ಕ್ರಿಕೆಟ್: ಟೀಂ ಇಂಡಿಯಾ ಆಟಗಾರರಿಗೆ ಕೇಸರಿ ಬಣ್ಣದ ಬಟ್ಟೆ, ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಟೀಕೆ

Promotion

ಬೆಂಗಳೂರು, ನವೆಂಬರ್ 19, 2023 (www.justkannada.in): ಕ್ರಿಕೆಟ್ ಟೀಂ ಇಂಡಿಯಾ ತಂಡದ ಆಟಗಾರರು ಅಭ್ಯಾಸ ವೇಳೆ ಕೇಸರಿ ಬಣ್ಣದ ಬಟ್ಟೆ ಧರಿಸುತ್ತಿರುವುದಕ್ಕೆ ಬಿಜೆಪಿ ವಿರುದ್ಧ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಲ್ಲ ಕಡೆ ಕೇಸರಿ ಬಣ್ಣ ಬಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಅಧಿಕಾರ ಬರುತ್ತದೆ ಮತ್ತು ಹೋಗುತ್ತದೆ. ಈ ದೇಶ ಜನರದ್ದಾಗಿದೆ, ಕೇವಲ ಒಂದು ಪಕ್ಷದ ಅಲ್ಲ ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಜಗದಾತ್ರಿ ಪೂಜೆಯ ಉದ್ಘಾಟನಾ ಸಮಯದಲ್ಲಿ ಮಾತನಾಡಿದ ಅವರು, ಈ ಹಿಂದೆ ಆಟಗಾರರು ನೀಲಿ ಬಣ್ಣದ ಉಡುಪು ಧರಿಸುತ್ತಿದ್ದರು. ಈಗ ಕೇಸರಿ ಬಣ್ಣದ ಬಟ್ಟೆ ಧರಿಸುತ್ತಿದ್ದಾರೆ. ಮೆಟ್ರೋ ನಿಲ್ದಾಣಕ್ಕೆ ಕೂಡ ಕೇಸರಿ ಬಣ್ಣ ನೀಡಲಾಗಿದೆ ಎಂದು ಬ್ಯಾನರ್ಜಿ ಟೀಕಿಸಿದ್ದಾರೆ.

ಪುತ್ತಳಿ ನಿಲ್ಲಿಸಲು ನನ್ನ ಆಕ್ಷೇಪವಿಲ್ಲ, ಆದರೆ ಎಲ್ಲಕಡೆ ಕೇಸರಿ ಬಣ್ಣ ಬಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಅಧಿಕಾರ ಬರುತ್ತದೆ ಮತ್ತು ಹೋಗುತ್ತದೆ. ಈ ದೇಶ ಜನರದ್ದಾಗಿದೆ ಎಂದು ಹೇಳಿದ್ದಾರೆ.