ಕೋವಿಡ್ ಲಸಿಕೆ ಬಗ್ಗೆ ಅಪಪ್ರಚಾರ ಆರೋಪ: ಬಿಜೆಪಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ತಿರುಗೇಟು ನೀಡಿದ್ದು ಹೀಗೆ..?

ಬೆಂಗಳೂರು,ಮೇ,,22,2021(www.justkannada.in): ಕೊರೋನಾ ಲಸಿಕೆ  ಬಗ್ಗೆ ಕಾಂಗ್ರೆಸ್ ನವರು ಅಪಪ್ರಚಾರ ನಡೆಸಿದ ಹಿನ್ನೆಲೆ ಲಸಿಕೆಯಿಂದ ದೂರು ಉಳಿದರು ಎಂದು ಆರೋಪಿಸಿರುವ ಬಿಜೆಪಿ ನಾಯಕರಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.jk

ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಲಸಿಕೆ ಹಾಕಿಸಿಕೊಳ್ಳಬೇಡಿ ಎಂದು  ಕಾಂಗ್ರೆಸ್ ನ ಯಾವ ನಾಯಕರೂ ಹೇಳಿಲ್ಲ. ತಜ್ಞರು ಎತ್ತಿರುವ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸಿ. ಲಸಿಕೆಗಳ ಟ್ರಯಲ್ ಅನ್ನು ಪೂರ್ಣಗೊಳಿಸಿ ಅಂತಾ ಹೇಳಿದ್ರೆ ತಪ್ಪಾ..? ಎಂದು ಪ್ರಶ್ನಿಸಿದರು.covid-vaccine-accused-former-cm-siddaramaiah-tong-bjp

ಕೊರೋನಾ ನಿಯಂತ್ರಿಸಬೇಕಾದರೇ ಲಸಿಕೆಯೇ ಪರಿಹಾರ ಎಂದು ಹೇಳುತ್ತಾ ಬಂದಿದ್ದೇನೆ. ಜನರು ಲಸಿಕೆ ಪಡೆಯುತ್ತಿಲ್ಲ ಎಂದು ಜನರ ಮೇಲೆಯೇ ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಮಾರ್ಚ್ 7 ನೇ ತಾರೀಖಿನಿಂದ ಏಪ್ರಿಲ್ 25 ರವರೆಗೆ ಪ್ರತಿ ದಿನ 25 ಲಕ್ಷ ಡೋಸ್ ನಿಂದ ಹಿಡಿದು 45 ಲಕ್ಷ ಡೋಸ್ ಲಸಿಕೆಗಳನ್ನು ಜನರಿಗೆ ನೀಡಲಾಗಿದೆ. ಆದರೆ ಜನ ಲಸಿಕೆ ಬೇಕು ಎಂದುಏಪ್ರಿಲ್ 25 ರಿಂದ ಈಚೆಗೆ ದಿನಕ್ಕೆ ಕೇವಲ 10ರಿಂದ 13 ಲಕ್ಷಕ್ಕೆ ಇಳಿಸಿರುವುದು ಏಕೆ? ಲಸಿಕೆ ಬೇಕು ಎಂದು ಜನ ಕೇಳುತ್ತಿದಾರಲ್ಲ ಕೊಡಿ ಹಾಗಿದ್ದರೆ. ಏಪ್ರಿಲ್ 28 ನೇ ತಾರೀಖಿನಂದು ಒಂದೇ ದಿನ 1.33 ಕೋಟಿ ಯುವಕರು ಲಸಿಕೆ ಬೇಕು ಎಂದು ಕೋರಿದರು. ಮೇ 1 ರಿಂದ ಲಸಿಕೆ 18 ತುಂಬಿದವರಿಗೂ ಲಸಿಕೆ ನೀಡಲಾಗುವುದೆಂದು ಹೇಳಿ ಕಡೆಗೆ ಅನಿರ್ಧಿಷ್ಟಾವಧಿ ಮುಂದೂಡಿದರು. ಇನ್ನೂ ಸಮರ್ಪಕವಾಗಿ ಪ್ರಾರಂಭಿಸಿಲ್ಲ ಏಕೆ? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.

Key words: covid vaccine- accused -Former CM -Siddaramaiah –tong- BJP