ಕೋವಿಡ್ ಚಿಕಿತ್ಸೆ ಕೊಡಿ ಅಂದ್ರೆ ವೈದ್ಯರಿಗೂ ಕೊರೋನಾ ಬರುತ್ತೆ ಅಂತಾ ಉದ್ದಟತನ ಉತ್ತರ – ಶಾಸಕ ಎಲ್. ನಾಗೇಂದ್ರ ಆರೋಪ…

Promotion

ಮೈಸೂರು,ಮೇ,5,2021(www.justkannada.in): ಕೋವಿಡ್ ಚಿಕಿತ್ಸೆ ಕೊಡಿ ಅಂದ್ರೆ ವೈದ್ಯರಿಗೂ ಕೋವಿಡ್ ಬರುತ್ತೆ ಎಂದು ಉದ್ದಟತನ ಉತ್ತರ ಕೊಡುತ್ತಿದ್ದಾರೆ. ವೈದ್ಯರೇ ವಾರ್ಡ್‌ ಗೆ ಹೋಗಿ ಚಿಕಿತ್ಸೆ ಕೊಡದಿದ್ರೆ ಇನ್ಯಾರು ಚಿಕಿತ್ಸೆ ಕೊಡಬೇಕು? ಎಂದು ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಗಂಭೀರ ಆರೋಪ ಮಾಡಿದರು.

ಮೈಸೂರಿನಲ್ಲಿ ಈ ಕುರಿತು ಮಾತನಾಡಿದ ಶಾಸಕ ನಾಗೇಂದ್ರ, ಈ ಬಗ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮೈಸೂರಿನಲ್ಲು ಬೆಡ್‌ ನ ವಿಷಯವಾಗಿ ಸಾಕಷ್ಟು ಸಮಸ್ಯೆ ಇದೆ. ಇದಕ್ಕಾಗೆ ನಾನು ಬೆಳಗ್ಗೆ ಸಚಿವರ ಜೊತೆ ವಿಶೇಷ ಸಭೆ ಮಾಡಿಸಿದ್ದೇನೆ. ಚಾಮರಾಜ ಕ್ಷೇತ್ರದ ಕೆ.ಆರ್ ಆಸ್ಪತ್ರೆಯಲ್ಲಿ ಲೋಪ ಆಗಿದೆ. ಬೆಡ್ ವಿಚಾರದಲ್ಲಿ ಅಧಿಕಾರಿಯೊಬ್ಬರನ್ನ ವರ್ಗಾಯಿಸಲಾಗಿದೆ‌. ಅಲ್ಲಿಗೆ ಬೇರೆ ಅಧಿಕಾರಿಯನ್ನ ನಿಯೋಜನೆ ಮಾಡಲಾಗಿದೆ. ಕೆಲಸ ಮಾಡದ ಅಧಿಕಾರಿಗಳ ಅಧಿಕಾರ ಮೊಟಕು ಮಾಡಲಾಗಿದೆ. ಸ್ವಲ್ಪ ಸಮಸ್ಯೆ ಇದ್ದ ಕಾರಣ ಅವರನ್ನ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದರು.covid-treatment-corona-longitudinal-answer-mla-l-nagendra

ಶಾಸಕರು ಫೋನ್ ಕರೆ ಮಾಡಿದ್ರೆ ಸ್ವೀಕಾರ ಮಾಡ್ತಿಲ್ಲ. ಸ್ವೀಕಾರ ಮಾಡಿದ್ರೆ ಉದ್ದಟತನ ಉತ್ತರ ಕೊಡುತ್ತಾರೆ. ನಮ್ಮ ಫೋನನ್ನೇ ಎತ್ತಿಲ್ಲ ಅಂದ್ರೆ ಸಾಮಾನ್ಯರ ಪರಿಸ್ಥಿತಿ ಏನು ಎಂಬುದರ ಬಗ್ಗೆಯು ಸಚಿವರಿಗೆ ತಿಳಿಸಿದ್ದೇನೆ. ಒಬ್ಬ ಜನಪ್ರತಿನಿಧಿ ಕರೆ ಮಾಡಿದ್ರೆ ಸರಿಯಾಗಿ ಸ್ಪಂದನೆ ಕೊಡಲ್ಲ. ಡೀನ್ ಇರ್ ರೆಸ್ಪಾನ್ಸಿಬಲ್ ಆಗಿ ನಡೆದುಕೊಂಡಿದ್ದಾರೆ ಎಂದು ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಶಾಸಕ ಎಲ್.ನಾಗೇಂದ್ರ ಆಕ್ರೋಶ ಹೊರ ಹಾಕಿದರು.

Key words: Covid-Treatment- Corona – Longitudinal –answer-MLA-L. Nagendra