ಇಂದು ಸಂಜೆ ಕೋವಿಡ್ ಟಾಸ್ಕ್ ಫೋರ್ಸ್ ಸಭೆ..

Promotion

ಬೆಂಗಳೂರು,ಜು,20,2020(www.justkannada.in):  ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿದ್ದು ಈ ನಡುವೆ ಇಂದು ಕೊರೋನಾ ಟಾಸ್ ಫೋರ್ಸ್‌ನ ಮಹತ್ವದ ಸಭೆ ನಡೆಯಲಿದೆ.

ವಿಧಾನಸೌಧದಲ್ಲಿ ಸಂಜೆ‌ 4 ಗಂಟೆಗೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಶ್ರೀರಾಮುಲು ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಪ್ರಮುಖವಾಗಿ ಲಾಕ್​​ಡೌನ್ ಮುಂದುವರಿಕೆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. jk-logo-justkannada-logo

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣ ಹೆಚ್ಚುತ್ತಿದ್ದು ಈ ಹಿನ್ನೆಲೆ ಜಾರಿಯಲ್ಲಿರುವ ಲಾಕ್​​ಡೌನ್ ಮುಂದುವರಿಸಬೇಕೆ ಬೇಡವೇ ಎಂಬುದು ಚರ್ಚಗೆ ಬರಲಿದೆ. ಲಾಕ್ ಡೌನ್ ಮುಗಿಯಲು ಇನ್ನು ಎರಡು ದಿನ ಬಾಕಿ ಇದೆ. ಹೀಗಾಗಿ ಅದನ್ನು ಮುಂದುವರಿಸಬೇಕಾ ಬೇಡವಾ ಎಂಬುದನ್ನು ಈ ಸಭೆಯಲ್ಲಿ ಬಗ್ಗೆ ಚರ್ಚಿಸಿ ಅದನ್ನು ಸಿಎಂಗೆ ತಿಳಿಸಲಿದ್ದಾರೆ. ನಂತರ ಸಿಎಂ ಯಡಿಯೂರಪ್ಪ ಲಾಕ್​ಡೌನ್​​ ಬಗ್ಗೆ ಅಂತಿಮ ತೀರ್ಮಾನ ಸಿಎಂ ತೆಗೆದುಕೊಳ್ಳಲಿದ್ದಾರೆ.covid-task-force-meeting-evening

ಟಾಸ್ಕ್​​ ಫೋರ್ಸ್​ ಸಭೆಯಲ್ಲಿ ಡಿಸಿಎಂ ಡಾ. ಅಶ್ವತ್ಥನಾರಾಯಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಭಾಗವಹಿಸುವ ಸಾಧ್ಯತೆ ಇದೆ.

 

Keywords: Covid -Task Force- meeting -evening.