ಕೋವಿಡ್ ಹೊಸ ತಳಿ ಪತ್ತೆ ಹಿನ್ನೆಲೆ: ಗಡಿಯಲ್ಲಿ ಕಟ್ಟುನಿಟ್ಟಿನ ಬಿಗಿ ಕ್ರಮ ಕೈಗೊಳ್ಳಿ- ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ.

ಬೆಂಗಳೂರು,ನವೆಂಬರ್,27,2021(www.justkannada.in):  ವಿದೇಶಗಳಲ್ಲಿ ಕೊರೋನಾ ಹೊಸ ತಳಿಯ ಒಮಿಕ್ರಾನ್ ಪತ್ತೆ ಹಿನ್ನೆಲೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರಿಗಳ ಜತೆ ಸಭೆ ನಡೆಸಿ ಹಲವು ಸೂಚನೆಗಳನ್ನ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ, ತಜ್ಞರ ಸಮಿತಿ ಬಳಿ ಹೊಸತಳಿ ಒಮಿಕ್ರಾನ್ ಬಗ್ಗೆ ಹಾಗೂ ರಾಜ್ಯದಲ್ಲಿನ ಕೋವಿಡ್ ಪ್ರಮಾಣ ನಿರ್ವಹಣೆ ಬಗ್ಗೆ ಮಾಹಿತಿ ಪಡೆದರು.

ಬಳಿಕ ಸೋಂಕು ಹೆಚ್ಚಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಿಎಂ ಬೊಮ್ಮಾಯಿ, ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ನಿಗಾವಹಿಸಿ. ಗಡಿ ಭಾಗಗಳಲ್ಲಿ 24 ಗಂಟೆಗಳಲ್ಲೂ ಕಟ್ಟುನಿಟ್ಟಿನ ಬಿಗಿ ಕ್ರಮ ಕೈಗೊಳ್ಳಿ. ಸಿಬ್ಬಂದಿ ಶಿಫ್ಟ್ ವೈಸ್ ತಪಾಸಣೆ ನಡೆಸಲಿ. ಬರುವ ಪ್ರಯಾಣಿಕರು ಲಸಿಕೆ ಪಡೆದಿದ್ದಾರೋ ಇಲ್ಲವೋ ಪರಿಶೀಲಿಸಿ. 2ನೇ ಡೋಸ್ ಕೋವಿಡ್ ಲಸಿಕೆ  ಚುರುಕುಗೊಳಿಸಿ ಎಂದು ಅಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದರು.

Key words:  covid-Take –strict- tightening -action – border-  CM Bommai