ಕೋವಿಡ್ ಕಿಟ್ ಖರೀದಿಯಲ್ಲಿ ಆವ್ಯವಹಾರ ಆರೋಪ: ಅಕ್ರಮ ಸಾಬೀತಾದ್ರೆ ರಾಜೀನಾಮೆ- ಸಿದ್ದರಾಮಯ್ಯಗೆ ಸವಾಲು ಹಾಕಿದ ಸಚಿವ ಶ್ರೀರಾಮುಲು….

Promotion

ಬೆಂಗಳೂರು,ಜು,20,2020(www.justkannada.in):  ಕೋವಿಡ್ -19 ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಆರೋಗ್ಯ ಸಚಿವ ಶ್ರೀರಾಮುಲು ಸವಾಲು ಹಾಕಿದ್ದಾರೆ.jk-logo-justkannada-logo

ಕೋವಿಡ್ ಕಿಟ್ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಸಿದ್ಧರಾಮಯ್ಯ ಆರೋಪದಲ್ಲಿ ಸತ್ಯವಿಲ್ಲ. ಅರೋಪದಲ್ಲಿ ಹುರುಳಿಲ್ಲ. ಸಿದ್ದರಾಮಯ್ಯ ತಮ್ಮ ಆರೋಪ ಸಾಬೀತುಪಡಿಸಲಿ. ಅಕ್ರಮ ಸಾಬೀತು ಪಡಿಸಿದರೇ ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸವಾಲು ಹಾಕಿದ್ದಾರೆ.

ಕೋವಿಡ್ ಉಪಕರಣ ಖರೀದಿಯಲ್ಲಿ ಅವ್ಯವಹಾರ ಆರೋಪ ಕುರಿತು  ಸಚಿವರಾದ ಶ್ರೀರಾಮುಲು ಮತ್ತು ಅಶ್ವಥ್ ನಾರಾಯಣ್ ಸುದ್ಧಿಗೋಷ್ಠಿ  ನಡೆಸಿ ವಿಪಕ್ಷಗಳ ಆರೋಪಕ್ಕೆ ಉತ್ತರ ಕೊಟ್ಟರು. ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ಇಂತಹ ಪರಿಸ್ಥಿತಿ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಕೋವಿಡ್ ಕಿಟ್ ಗಳ ಖರೀದಿಯಲ್ಲಿ ಅವ್ಯವಹಾರ ನಡೆದಿಲ್ಲ. ನಾವು ಪಾರದರ್ಶಕವಾಗಿಯೇ ಖರೀದಿಸಿದ್ದೇವೆ ಎಂದರು.

ರಾಜ್ಯದಲ್ಲಿ ಒಟ್ಟು 9,65,000 ಪಿಪಿಪಿ ಕಿಟ್ ಖರೀದಿಸಿದ್ದೇವೆ. ಇದಕ್ಕೆ 79,35,16,516 ರೂ ಖರ್ಚಾಗಿದೆ.  ಹೀಗಾಗಿ ಒಂದೇ ಒಂದು ರೂಪಾಯಿ ಅವ್ಯವಹಾರ ಆಗಿಲ್ಲ. ಅವ್ಯವಹಾರವಾಗಿದ್ದರೇ ನಾನು ಈ ಸ್ಥಾನದಲ್ಲಿ ಕೂರುತ್ತಿರಲಿಲ್ಲ.  ಈವರೆಗೆ ಕೋವಿಡ್ ಕಿಟ್ ಖರೀದಿಗೆ 79 ಕೋಟಿ ಮಾತ್ರ ಖರ್ಚಾಗಿದೆ. ಆದರೆ ಸಿದ್ಧರಾಮಯ್ಯ 150 ಕೋಟಿ ಅವ್ಯವಹಾರವಾಗಿದೆ ಎಂದು ಆರೋಪಿಸಿದ್ದಾರೆ. ಇದು ಹೇಗೆ ಸಾಧ್ಯ ಎಂದು ಸಚಿವ ಶ್ರೀರಾಮುಲು ಪ್ರಶ್ನಿಸಿದರು.covid-kit-illegal-minister-sriramulu-challenge-former-cm-siddaramaiah

ವೆಂಟಿಲೇಟರ್ ಗೆ ಒಂದೊಂದು ದರ ಇದೆ. ವೆಂಟಿಲೇಟರ್ ದರ 4 ಲಕ್ಷದಿಂದ 60 ಲಕ್ಷದವರೆಗೆ ಇದೆ.  ನಮಗೆ 640 ವೆಂಟಿಲೇಟರ್ ಬಂದಿವೆ. ಇದಕ್ಕೆ ಕೇಂದ್ರ ಸರ್ಕಾರವೇ ಹಣ ಪಾವತಿಸಿದೆ. 5.6 ಲಕ್ಷದ 80 ವೆಂಟಿಲೇಟರ್ ಖರೀದಿಸಿದ್ದೇವೆ. ಇದಕ್ಕೆ 7ಕೋಟಿ 28 ಲಕ್ಷ ಖರ್ಚಾಗಿದೆ. ಒಂದು ವೆಂಟಿಲೇರ್ ಗೆ 18 ಲಕ್ಷ ನೀಡಿದ್ದೇವೆ. ವೆಂಟಿಲೇಟರ್ ಗೆ 10.61 ಕೋಟಿ ರೂ ಖರ್ಚು ಮಾಡಿದ್ದೇವೆ ಎಂದು ಆರೋಗ್ಯ ಸಚಿವ  ಶ್ರೀರಾಮುಲು ವಿವರಿಸಿದರು.

Key words: Covid kit-Illegal -Minister -Sriramulu –challenge-former CM- Siddaramaiah.