ದೇಶದಲ್ಲಿ ಒಂದೇ ದಿನ 4 ಲಕ್ಷದ ಗಡಿ ದಾಟಿದ ಕೋವಿಡ್ ಕೇಸ್…

ನವದೆಹಲಿ,ಮೇ,1,2021(www.justkannada.in): ದೇಶದಲ್ಲಿ ಕೊರೋನಾ 2ನೇ ಅಲೆ ಹೆಚ್ಚಾಗಿದ್ದು ಜನರಲ್ಲಿ ಆತಂಕ ಸೃಷ್ಠಿಸಿದೆ. ಈ ನಡುವೆ ದೇಶದಲ್ಲಿ  ಒಂದೇ ದಿನ ಕೊರೋನಾ ಸೋಂಕಿತರ ಸಂಖ್ಯೆ 4 ಲಕ್ಷದ ಗಡಿ ದಾಟಿದೆ.jk

ಕಳೆದ 24 ಗಂಟೆಗಳಲ್ಲಿ 4,01,993 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1,91,64,969 ಕ್ಕೆ ಏರಿಕೆಯಾಗಿದೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಲ್ಲಿ 3,523 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ವೈರಸ್ ಸೋಂಕಿಗೆ ಮೃತಪಟ್ಟವರ ಸಂಖ್ಯೆ 2,11,853 ಕ್ಕೆ ಏರಿಕೆಯಾಗಿದೆ.covid-case-crosses-4-lakh-borders-single-day-country

ಹಾಗೆಯೇ ಒಂದೇ ದಿನ 2,97,698 ಮಂದಿ ಕೊರೋನಾ ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ದೇಶದಲ್ಲಿ 32 ಲಕ್ಷ ಕೊರೊನಾ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ENGLISH SUMMARY…

India witnesses more than 4 lakh new COVID cases in the last 24 hours!
New Delhi May 1, 2021 (www.justkannada.in): The new cases of COVID in the country crossed the 4 lakh mark in the last 24 hours.
4,01,993 new cases were registered increasing the tally to 1,91,64,969 as per the information provided by the Union Health Ministry. 3,523 people have lost their lives increasing the tally to 2,11,853.covid-case-crosses-4-lakh-borders-single-day-country
2,97,698 people have recovered and have been discharged from various hospitals across the country at the same time. Presently there are 32 lakh active cases.
Keywords: COVID-19 Pandemic/ 4 lakh mark!/ 24 hours

Key words: Covid case-crosses -4 lakh- borders – single day – country.