ಕೋವಿಡ್ ಆತಂಕ: ಚೀನಾದಿಂದ ಬರುವ ವಿಮಾನ ಬಂದ್ ಮಾಡಿ ಸರ್ಕಾರ ಕ್ರಮ ಕೈಗೊಳ್ಳಿ- ಮಾಜಿ ಸಿಎಂ ಸಿ‍ದ‍್ಧರಾಮಯ್ಯ ಸಲಹೆ.

Promotion

ಬೆಳಗಾವಿ,ಡಿಸೆಂಬರ್,22,2022(www.justkannada.in):  ಇಷ್ಟು ದಿನ ತಣ್ಣಗಾಗಿದ್ದ ಕೋವಿಡ್ ಅಲೆಯ ಭೀತಿ ಇದೀಗ ಮತ್ತೆ ಶುರುವಾಗಿದೆ. ಈ ನಡುವೆ ಕೊರೋನಾ ನಿಯಂತ್ರಣಕ್ಕೆ ಚೀನಾದಿಂದ ಬರುವ ವಿಮಾನ ಬಂದ್ ಮಾಡಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಸಲಹೆ ನೀಡಿದ್ದಾರೆ.

ವಿಧಾನಸಭೆ ಕಲಾಪದಲ್ಲಿ ಇಂದು ಕೊರೊನಾ ಬಗ್ಗೆ ಪ್ರಸ್ತಾಪಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ, ಕೋವಿಡ್ 2ನೇ ಅಲೆಯಲ್ಲಿ ತುಂಬಾ ಅನುಭವಿಸಿದ್ದೇವೆ . ಚೀನಾದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಾಗಿದೆ. ಚೀನಾದಿಂದ ಬರುವ ವಿಮಾನಗಳನ್ನ ಬಂದ್ ಮಾಡಿ ಅದಷ್ಟು ಬೇಗ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ಈ ವೇಳೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್,  ವಿದೇಶಗಳಲ್ಲಿ ಕೋವಿಡ್ ಹೆಚ್ಚಳವಾಗಿರುವುದು ನಿಜ. ಈ ಸಂಬಂಧ ಸಿಎಂ, ಅಧಿಕಾರಿಗಳ ಸಭೆ ಕರೆದಿದ್ದಾರೆ. ಪ್ರಧಾನಿ ಮೋದಿ ಸಹ ಸಭೆ ಕರೆದ್ದಾರೆ. ಈಗಾಗಲೇ 2ನೇ ಡೋಸ್ ಲಸಿಕೆ ನೀಡಿದ್ದೇವೆ ಎಲ್ಲರೂ ಬೂಸ್ಟರ್ ಡೋಸ್  ತೆಗೆದುಕೊಳ್ಳಬೇಕು.  ಸೋಮವಾರದಿಂದ ಈ ಬಗ್ಗೆ ಜಾಗೃತಿ ಮೂಡಿಸುತ್ತೇವೆ ಎಂದು ತಿಳಿಸಿದರು.

Key words: Covid- Ban – China -flight – government –action-  Former CM –Siddhiramaiah-advice.