ಕೋವಿಡ್-19 : ಸಮುದಾಯ ಮತ್ತು ಸಾಂಕ್ರಾಮಿಕತೆ ಕುರಿತು ಏ.30 ರಂದು ಕುತೂಹಲಿ ಕನ್ನಡ ವಿಜ್ಞಾನ ಜಾಲಗೋಷ್ಠಿ…

Promotion

ಮೈಸೂರು,ಏಪ್ರಿಲ್,28,2021(www.justkannada.in): ವಿಜ್ಞಾನ ಪ್ರಸಾರ್‌, ನವದೆಹಲಿ ಹಾಗೂ ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ, ಬೆಂಗಳೂರು  ವತಿಯಿಂದ ಸ್ವಾಮಿ ವಿವೇಕಾನಂದ ಯೂಥ್‌ ಮೂವ್ಮೆಂಟ್  ನೆರವಿನಲ್ಲಿ ಏಪ್ರಿಲ್ 30 ರಂದು ಕೋವಿಡ್-19: ಸಮುದಾಯ ಮತ್ತು ಸಾಂಕ್ರಾಮಿಕತೆ ಕುರಿತು ಕುತೂಹಲಿ ಕನ್ನಡ ವಿಜ್ಞಾನ ಜಾಲಗೋಷ್ಠಿಯನ್ನು ಆಯೋಜಿಸಲಾಗಿದೆ.jk

ಏಪ್ರಿಲ್‌ 30 ಶುಕ್ರವಾರದ ಸಂಜೆ 7.00 ಗಂಟೆಗೆ ಕುತೂಹಲಿ ಕನ್ನಡ ವಿಜ್ಞಾನ ಜಾಲಗೋಷ್ಠಿಯನ್ನು ಆಯೋಜಿಸಲಾಗಿದ್ದು, ಕೋವಿಡ್‌ 19 ಸಾಂಕ್ರಾಮಿಕ ರೋಗದ ಹೊಸ ಅಲೆ ಆರಂಭವಾಗಿದೆ. ಇದು ಸಮುದಾಯದಲ್ಲಿ ಇನ್ನಷ್ಟು ಹರಡದಂತೆ ತಡೆಯುವುದು ಹೇಗೆ? ಯಾವ ಕ್ರಮಗಳು ಅವಶ್ಯಕ? ಎಂಬ ಬಗ್ಗೆ ಚರ್ಚಸಲಾಗುತ್ತದೆ.

ಕನ್ನಡ ವಿಜ್ಞಾನ ಜಾಲಗೋಷ್ಠಿಯಲ್ಲಿ  ಸ್ವಾಮಿ ವಿವೇಕಾನಂದ ಯೂಥ್‌ ಮೂವ್ಮೆಂಟ್, ಸಮುದಾಯ ಸ್ವಾಸ್ಥ್ಯ ವಿಭಾಗದ(Community Health)  ಹಿರಿಯ ಮ್ಯಾನೇಜರ್‌ ಡಾ. ಗೌತಮಿ. ಪಿ ಪಾಲ್ಗೊಳ್ಳಲಿದ್ದಾರೆ.

ಜೂಮ್‌  ಜಾಲತಾಣದಲ್ಲಿ. https://bit.ly/3tl8aWn ID: 838 3460 8715   ಪಾಸ್‌ ವರ್ಡ್‌ : 941968 ಈ ಮೂಲಕ ಜಾಲಗೋಷ್ಠಿಯಲ್ಲಿ ಪಾಲ್ಗೊಂಡು ಮಾಹಿತಿ ಪಡೆಯಬಹುದು.

Key words: Covid-19- Curious -Science Workshop -Community and Epidemiology- mysore