ಮೈಸೂರಿನಲ್ಲಿ ಕೋವಿಡ್ ಸಂಬಂಧ ಕ್ಲೋಸ್ ಡೋರ್ ಮೀಟಿಂಗ್: ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭಾಗಿ…

ಮೈಸೂರು,ಮೇ,5,2021(www.justkannada.in): ಮೈಸೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಎರಡನೇ ಅಲೆ ಹಿನ್ನೆಲೆ  ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್  ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಜತೆ ಸಭೆ ನಡೆಸುತ್ತಿದ್ದಾರೆ.jk

ಮೈಸೂರು ಜಿಲ್ಲೆಯ ಕೋವಿಡ್ ನಿರ್ವಹಣೆ ಕುರಿತು ಜಿಲ್ಲಾ ಪಂಚಾಯತ್ ನ ದೇವರಾಜ ಅರಸು ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ.  ಸಭೆಗೆ ಶಾಸಕ ರಾಮದಾಸ್, ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಗೈರಾಗಿದ್ದು, ಉಳಿದಂತೆ ಸಂಸದ ಪ್ರತಾಪ್ ಸಿಂಹ, ಎಂ.ಎಲ್.ಸಿ ಹೆಚ್ ವಿಶ್ವನಾಥ್, ಶಾಸಕರಾದ ಯತೀಂದ್ರ, ಹೆಚ್.ಪಿ ಮಂಜುನಾಥ್, ಎಲ್.ನಾಗೇಂದ್ರ, ತನ್ವಿರ್ ಸೇಠ್, ಜಿಟಿ ದೇವೇಗೌಡ, ಅಶ್ವಿನ್ ಕುಮಾರ್, ಸಾ.ರಾ ಮಹೇಶ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಎಸ್.ಪಿ ರಿಷ್ಯಂತ್,  ಪೊಲೀಸ್ ಆಯುಕ್ತ ಚಂದ್ರಗುಪ್ತ ಭಾಗಿಯಾಗಿದ್ದಾರೆ.

ಚಾಮರಾಜ ವಿಧಾನಸಭಾ ಕ್ಷೇತ್ರದ  ಕುರಿತು ಸಭೆ: ಅಧಿಕಾರಿಗಳ ವಿರುದ್ಧ ಎಲ್. ನಾಗೇಂದ್ರ ಗರಂ…

ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಸಭೆ ನಡೆಯಿತು. ಸಭೆಯಲ್ಲಿ ಸಂಸದ ಪ್ರತಾಪ್‌ಸಿಂಹ ಶಾಸಕ ನಾಗೇಂದ್ರ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ,  ಪಾಲಿಕೆ ಆಯಕ್ತರಾದ ಶಿಲ್ಪಾ ನಾಗ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.

ಆರಂಭದಲ್ಲೇ ಪಾಲಿಕೆ ಆರೋಗ್ಯಾಧಿಕಾರಿಗೆ ತರಾಟೆ ತೆಗೆದುಕೊಂಡ ಶಾಸಕ ಎಲ್.  ನಾಗೇಂದ್ರ, ಯಾವ ಯಾವ ಆಸ್ಪತ್ರೆಯಲ್ಲಿ ಎಷ್ಟು ಜನ ಇದ್ದಾರೆ  ಎಂದು ಪ್ರಶ್ನಿಸಿದರು. ಈ ವೇಳೆ ಪಾಲಿಕೆ ಆರೋಗ್ಯಾಧಿಕಾರಿ ಹೇಳುತ್ತೇನೆ ಎಂದರು. ಈ ವೇಳೆ ಶಾಸಕ ನಾಗೇಂದ್ರ ಗರಂ ಆಗಿದ್ದು,  ನಿಮಗೆ ಮಾಹಿತಿ ಇಲ್ಲ. ಮೊದಲು ಅದನ್ನು ತೆಗೆದುಕೊಳ್ಳಿ ಎಂದು ಕಿಡಿಕಾರಿದರು.covid-19-close-door-meeting-mysore-minister-st-somasheakar

ಹಾಗೆಯೇ ಒಬ್ಬ ಶಾಸಕನಾಗಿ ನಾನು ಬೆಡ್‌ ಗೆ ಬೆಗ್ ಮಾಡಬೇಕಾ.? ಜನ ಸಾಯ್ತಾ ಇದ್ದಾರೆ ಇವರು ಈ ರೀತಿ ಮಾಡ್ತಾ ಇದ್ದಾರೆ. ವೈದ್ಯರಿಗೆ ಕೋವಿಡ್ ಆಗ್ತಾ ಇದೆ, ಒಳಗೆ ಹೋಗೋಕೆ ಆಗಲ್ಲ ಅಂತಾರೆ.. ಒಬ್ಬ ಶಾಸಕನಿಗೆ ಈ ರೀತಿ ಹೇಳಿದರೆ ಹೇಗೆ.? ಎಂದು  ಅಧಿಕಾರಿಗಳ ವಿರುದ್ದ ಶಾಸಕ ನಾಗೇಂದ್ರ ಪುಲ್ ಗರಂ ಆದರು.

Key words: covid-19- Close -Door Meeting – Mysore-minister ST Somasheakar