ದೇಶದ ಅರ್ಧದಷ್ಟು ಜನರು ಹಸಿವಿನಿಂದ ಬಳಲುತ್ತಿದ್ದು, ಹೊಸ ಸಂಸತ್ತಿನ ಅವಶ್ಯಕತೆ ಏನಿತ್ತು? : ನಟ ಕಮಲ್ ಹಾಸನ್ ಪ್ರಶ್ನೆ

ಚೆನ್ನೈ,ಡಿಸೆಂಬರ್,13,2020(www.justkannada.in) : ಭಾರತದ ಅರ್ಧದಷ್ಟು ಜನರು ಹಸಿವಿನಿಂದ ಬಳಲುತ್ತಿರುವ ಈ ಸಂದರ್ಭದಲ್ಲಿ ಹೊಸ ಸಂಸತ್ತಿನ ಅವಶ್ಯಕತೆ ಏನಿತ್ತು ಎಂದು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ನಟ, ರಾಜಕಾರಣಿ ಕಮಲ್ ಹಾಸನ್ ಪ್ರಶ್ನಿಸಿದ್ದಾರೆ.  logo-justkannada-mysoreದೇಶದ ಆರ್ಥಿಕತೆಯು ತೀವ್ರ ಸಂಕಷ್ಟವನ್ನು ಎದುರಿಸುತ್ತಿರುವ ಈ ಸಮಯದಲ್ಲಿ ಇಂತಹ ಬೃಹತ್ ಯೋಜನೆಯ ಅಗತ್ಯವೇನಿತ್ತು ಎಂದು ಹೊಸ ಸಂಸತ್ತು ಯೋಜನೆಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ನಟ, ರಾಜಕಾರಣಿ ಕಮಲ್ ಹಾಸನ್ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

ಡಿ.10ರಂದು ಸಾವಿರ ಕೋಟಿ ಅಂದಾಜು ವೆಚ್ಚದ ಹೊಸ ಸಂಸತ್ತು ಭವನಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ಮೇ.2021ರಲ್ಲಿ ನಡೆಯುವ ವಿಧಾನಸಭಾ ಚುನವಾಣೆಯಲ್ಲಿ ಕಮಲ್ ಹಾಸನ್ ಈ ಬಾರಿ ಸ್ಪರ್ಧಿಸುವ ಸಾಧ್ಯತೆಯಿದೆ. ತಮಿಳುನಾಡಿನ ಪರಿಸ್ಥಿತಿ ತೀರಾ ಹದಗೆಟ್ಟಿದೆ. ರಾಜ್ಯದ ಅಭಿವೃದ್ಧಿಗಾಗಿ ದುಡಿಯುತ್ತೇವೆ ಎಂದು ತಮ್ಮ ಪಕ್ಷದ ಬಗ್ಗೆ ಕಮಲ್ ಹಾಸನ್ ತಿಳಿಸಿದರು.

country-About-half-People-starving-What-need-new-parliament?-Actor-Kamal Haasan-Question

key words : country-About-half-People-starving-What-need-new-parliament?-Actor-Kamal Haasan-Question