ಇಡೀ ದೇಶವನ್ನೇ ಲೂಟಿ ಹೊಡೆದವರು ಇಂದು ನಮ್ಮ ಪ್ರಧಾನಿ ಬಗ್ಗೆ  ಮಾತನಾಡುತ್ತಾರೆ- ಕೇಂದ್ರ ಸಚಿವೆ ಶೋಭಾ ಕರಂಧ್ಲಾಜೆ ವಾಗ್ದಾಳಿ.

Promotion

ಮೈಸೂರು,ಆಗಸ್ಟ್,17,2021(www.justkannada.in): ಇಡೀ ದೇಶವನ್ನೇ ಲೂಟಿ ಹೊಡೆದವರು ಇಂದು ನಮ್ಮ ಪ್ರಧಾನಿ ಬಗ್ಗೆ  ಮಾತನಾಡುತ್ತಾರೆ. ನರೇಂದ್ರ ಮೋದಿ ಬಗ್ಗೆ ಮಾತನಾಡುವ ಯಾವ ಯೋಗ್ಯತೆಯೂ ಅವರಿಗಿಲ್ಲ . ಅಧಿಕಾರ ಬಿಟ್ಟರೆ ಅವರು ಬರೀ ಬ್ಯಾಗ್ ಹಿಡಿದು ಹೋಗುತ್ತಾರೆ. ಅವರ ಸ್ವಂತಕ್ಕಾಗಿ ಏನನ್ನೂ ಸಂಪಾದನೆ ಮಾಡಿಲ್ಲ. ಇಂತಹ ಪ್ರಧಾನಿ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಜನಾಶೀರ್ವಾದ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ,  ನೂತನ ಸಚಿವರು ಆದ ಮೇಲೆ ಜನರ ಮುಂದೆ ಮಂತ್ರಿಗಳನ್ನು ಪರಿಚಯಿಸುವ‌ ಕೆಲಸ ಪಕ್ಷ ಮಾಡುತ್ತಿದೆ. ಪ್ರಧಾನಿ ಹೊಸ ಸಚಿವರನ್ನು ಪರಿಚಯಿಸಲು ವಿಪಕ್ಷಗಳು ಬಿಡಲಿಲ್ಲ‌. ಹಾಗಾಗಿ ನೂತನ ಸಚಿವರು ಜನಾಶಿರ್ವಾದ ಯಾತ್ರೆ ಮೂಲಕ ನೂತನ ಸಚಿವರನ್ನು ಪರಿಚಯಿಸುವ ಕೆಲಸ ಮಾಡುತ್ತಿದೆ‌ ಎಂದರು.

ರಾಕ್ಷಸರನ್ನ ಬೆಳಸಿದರೆ ಏನಾಗುತ್ತದೆ ಎಂಬುದಕ್ಕೆ ಅಫಘಾನಿಸ್ಥಾನ ಉದಾಹರಣೆ.ರಾಕ್ಷಸರಿಂದ, ಭಯತ್ಪಾದಕರಿಂದ ಉಳಿಗಾಲವಿಲ್ಲ‌. ಅಫಘಾನಿಸ್ತಾನಕ್ಕೆ ಬಂದ ಸ್ಥಿತಿ ಯಾವ ದೇಶಕ್ಕೂ ಬರಬಾರದು ಎಂಬುದು ಎಲ್ಲಾ ದೇಶಗಳು ಅರಿತುಕೊಂಡಿವೆ. ಇವತ್ತು ಭಾರತ ಏನು ಹೇಳಿತ್ತೆ ಅಂತ ಕೇಳುವ ಸ್ಥಿತಿ ವಿಶ್ವಮಟ್ಟದಲ್ಲಿ ಇದೆ. ಭದ್ರತಾ ಮಂಡಳಿಯಲ್ಲಿ  ದೇಶಕ್ಕೆ ಗೌರವಿಸುವ ಸ್ಥಿತಿ ಹಿಂದೆ ಇರಲಿಲ್ಲ. ಇವತ್ತು ಪ್ರಧಾನಿ ನರೇಂದ್ರ ಮೋದಿ ಬಂದ ‌ಮೇಲೆ ವಿಶ್ವ ಸಂಸ್ಥೆಯಲ್ಲಿ ಎದ್ದು ನಿಂತು ಗೌರವಿಸುವ ಸಂದರ್ಭ ಈಗ ಬಂದಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ದೇಶದ ಪ್ರಧಾನಿ ಸಣ್ಣಪುಟ್ಟ ವಿಚಾರಗಳನ್ನು ಗಮನಿಸುತ್ತಾರೆ. ದೇಶದ ಎಲ್ಲಾ ವಿದ್ಯಮಾನಗಳ ಬಗ್ಗೆ ಚಿಂತಿಸಬೇಕು. ಇಂತಹ ಎಲ್ಲಾ ಕಾರ್ಯಕ್ರಮ ನಡುವೆಯೂ ರೈತನ ಸಮಸ್ಯೆ ಬಗ್ಗೆ ಮಾತನಾಡುವ ಪ್ರಧಾನಿ ನಮಗೆ ಸಿಕ್ಕಿದ್ದಾರೆ. ಕೃಷಿ ಇಲಾಖೆಯಲ್ಲಿ  ಆಮೂಲಾಗ್ರ ಬದಲಾವಣೆ ಆಗಿದೆ. 60 ರ ದಶಕದಲ್ಲಿ ಹಸಿರು ಕ್ರಾಂತಿ ಆಯ್ತು. ಕರೋನಾ ಸಂದರ್ಭದಲ್ಲಿ ವಿದೇಶಕ್ಕೆ ಆಹಾರ ಪದಾರ್ಥಗಳನ್ನು ರಫ್ತು ಮಾಡುವ ದೇಶ ಭಾರತ ಆಗಿದೆ. ಸಣ್ಣ ರೈತರಿಗೆ ಮೋದಿ ನೀಡುತ್ತಿರೊ ಯೋಜನೆಯಿಂದ ಇದೆಲ್ಲ ಸಾಧ್ಯವಾಗಿದೆ. ನೇರವಾಗಿ ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗಿದೆ.. ಫಸಲ್ ಭೀಮಾ ಯೋಜನೆ ಮೂಲಕ ರೈತರಿಗೆ ನೇರವಾಗಿ ಕೇಂದ್ರಕ್ಕೆ ಆ್ಯಪ್ ಮೂಲಕ ತನ್ನ ಬೆಳೆ ನಮೂದು ಮಾಡಬಹುದು. ಕೇಂದ್ರ ಸರ್ಕಾರಕ್ಕೆ ನೇರವಾಗಿ ರೈತನೆ ಕಳುಹಿಸುವ ವ್ಯವಸ್ಥೆ ಇದಾಗಿದೆ ಎಂದು ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Key words: country -today –speaks- about- our -Prime Minister – Union Minister-Shobha Karandlaje-against-congress