ರೋಡ್ ಶೋಗೆ ಕ್ಷಣಗಣನೆ: ಹೆಲಿಪ್ಯಾಡ್ ಗೆ  ಪ್ರಧಾನಿ ಮೋದಿ ಆಗಮನ

ಬೆಂಗಳೂರು ,ಮೇ,6,2023(www.justkannada.in): ರಾಜ್ಯ ವಿಧಾನಸಭೆ ಚುನಾವಣೆಗೆ ನಾಲ್ಕು ದಿನಗಳಷ್ಟೇ ಬಾಕಿ ಇದ್ದು, ಮೇ 8 ರಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಹೀಗಾಗಿ ಇಂದು ಮತ್ತು ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ.

ರೋಡ್ ಶೋಗೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲಾ ರೀತಿಯ ಸಿದ್ಧತೆಯೂ ಪೂರ್ಣಗೊಂಡಿದೆ. ಇಂದು ಪ್ರಧಾನಿ ಮೋದಿ ಬರೋಬ್ಬರಿ 26 ಕಿಲೋ ಮೀಟರ್ ರೋಡ್ ನಡೆಸಲಿದ್ದಾರೆ.

ಇದೀಗ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಲೊಯೊಲಾ ಕಾಲೇಜು ಹೆಲಿಪ್ಯಾಡ್  ಆಗಮಿಸಿದ್ದು, ಬಿಜೆಪಿ ನಾಯಕರು ಭರ್ಜರಿ ಸ್ವಾಗತ ಕೋರಿದ್ದಾರೆ.  ಬಳಿಕ ಲೊಯೊಲಾ ಕಾಲೇಜು ಹೆಲಿಪ್ಯಾಡ್‌ನಿಂದ ಕಾರಿನಲ್ಲಿ ಪ್ರಯಾಣಿಸಿ ಸೋಮೇಶ್ವರ ಭವನ ತಲುಪಿ 10 ಕಿ.ಮೀ. ವೇಗದಲ್ಲಿ ಪ್ರಧಾನಿ ರೋಡ್ ಶೋ ವಾಹನ ಸಾಗಲಿದೆ. ಬಿಬಿಎಂಪಿ ಪೌರಕಾರ್ಮಿಕರು ಸಿರ್ಸಿ ಸರ್ಕಲ್‌ ಬಳಿ ಬೃಹತ್ ಸಂಖ್ಯೆಯಲ್ಲಿ ಪ್ರಧಾನಿಗೆ ಪುಷ್ಪವೃಷ್ಟಿ ಮಾಡಲಿದ್ದಾರೆ. ಸಿರ್ಸಿ ಸರ್ಕಲ್‌ನಲ್ಲಿ 1 ನಿಮಿಷ ರೋಡ್ ಶೋ ವಾಹನ ನಿಲುಗಡೆ ಸಾಧ್ಯತೆ ಇದೆ. ರೋಡ್ ಶೋದಲ್ಲಿ ಪ್ರಧಾನಿ ಜೊತೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

Key words: Countdown -Prime Minister –Modi- road show -Bengaluru..