ಸಿಎಂ ಬಿ.ಎಸ್.ವೈರಿಂದ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಕ್ಷಣಗಣನೆ…. 

Promotion

ಮೈಸೂರು, ಆಗಸ್ಟ್, 21, 2020(www.just kannada.in)  ; ಕೆಆರ್ ಎಸ್ ಹಾಗೂ ಕಬಿನಿ ಜಲಾಶಯಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಾಗಿನ ಅರ್ಪಿಸಲಿದ್ದು, ಸಕಲ ರೀತಿಯಲ್ಲಿ ಸಿದ್ಧತೆ ನಡೆಸಲಾಗಿದೆ.

ಬೆಳಗ್ಗೆ 12.15ಕ್ಕೆ ಕೆಆರ್ ಎಸ್ ಗೆ ಸಿಎಂ ಯಡಿಯೂರಪ್ಪ ಅವರು ಬಾಗಿನ ಅರ್ಪಿಸಲಿದ್ದು, ಮಧ್ಯಾಹ್ನ 1.15ಕ್ಕೆ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲಿದ್ದಾರೆ.countdown-krs-offering-cm b.s.yeddyurappa

 

5ನೇ ಬಾರಿಗೆ ಕೆಆರ್ ಎಸ್ ಗೆ ಬಾಗಿನ ಅರ್ಪಣೆ : ಬಿಎಸ್ ಯಡಿಯೂರಪ್ಪ ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಂಡು 5ನೇ ಬಾರಿಗೆ  ಕೆಆರ್ ಎಸ್ ಗೆ ಬಾಗಿನವನ್ನು ಅರ್ಪಿಸುತ್ತಿದ್ದಾರೆ.

ಕಪ್ಪು ಬಾವುಟ ಪ್ರದರ್ಶನಕ್ಕೆ ರೈತರು ಸಜ್ಜು : ರೈತ ವಿರೋಧಿ ಕಾನೂನುಗಳನ್ನು ಜಾರಿ ಖಂಡಿಸಿ ಬಾಗಿನ ಅರ್ಪಣೆಗೆ ಆಗಮಿಸುತ್ತಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡುವುದಕ್ಕೆ ಕಬಿನಿ ಜಲಾಶಯದ ಬಳಿ ರೈತ ಸಂಘಟನೆಗಳು ಸಿದ್ಧತೆ ನಡೆಸಿರುವುದಾಗಿ ಕಬಿನಿ ರೈತ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

Key words  : countdown-krs-offering-cm b.s.yeddyurappa