ಮೈಸೂರು ಮಹಾನಗರ ಪಾಲಿಕೆಯಲ್ಲಿ  ಕೌನ್ಸಿಲ್ ಸಭೆ: ಪ್ರಭಾರ ಕಾರ್ಯಪಾಲಕ ಅಭಿಯಂತರರಾಗಿ ಮಹೇಶ್ ನೇಮಕ‌ ಮಾಡಿದ್ದಕ್ಕೆ ಕೆಲ ಸದಸ್ಯರ ವಿರೋಧ..

kannada t-shirts

ಮೈಸೂರು,ಜು,8,2019(www.justkannada.in): .ಮೈಸೂರು ಮಹಾನಗರ ಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್  ಅವರು ಮಹೇಶ್ ರನ್ನ ಪ್ರಭಾರ ಕಾರ್ಯಪಾಲಕ ಅಭಿಯಂತರರಾಗಿ ನೇಮಕ‌ ಮಾಡಿದ ಹಿನ್ನಲೆ, ಮಹೇಶ್ ನೇಮಕಕ್ಕೆ ಕೆಲ ಪಾಲಿಕೆ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಮೈಸೂರು ಮಹಾ ನಗರ ಪಾಲಿಕೆಯಲ್ಲಿ  ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ೨೦೧೯ ನೇ ಸಾಲಿನ ಜುಲೈ ಮಾಹೆಯ ಸಾಮಾನ್ಯ ಕೌನ್ಸಿಲ್ ಸಭೆ ನಡೆಯಿತು. ಮೇಯರ್ ಪುಷ್ಬಲತಾ ಜಗನ್ನಾಥ ಉಪ ಮೇಯರ್ ಶಫಿ ಅಹಮದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಲ ಪಾಲಿಕೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಕಾನೂನು ಪಾಲನೆ ಮಾಡದೆ‌ ಮೇಯರ್ ಮಹೇಶ್ ರನ್ನ ನೇಮಕ ಮಾಡಿದ್ದಾರೆ. ಸಭೆಯಲ್ಲಿ ಚರ್ಚೆ ಮಾಡದೆ ಮಹೇಶ್ ರನ್ನ ಮೇಯರ್ ನೇಮಕ‌ ಮಾಡಿದ್ದಾರೆ. ಇದರ ಬಗ್ಗೆ ಚರ್ಚೆ ಆಗಬೇಕು ಎಂದು ಕೆಲ ಪಾಲಿಕೆ ಸದಸ್ಯರು ತಿಳಿಸಿದರು. ಈಗಗಾಲೇ  ಮಹೇಶ್ ನೇಮಕ ವಿಚಾರ ಚರ್ಚೆ ಆಗಿದೆ ಎಂದು ಕೆಲ ಪಾಲಿಕೆ ಸದಸ್ಯರು ಹೇಳಿದರು. ಕೆಲಕಾಲ ಪಾಲಿಕೆ ಸಭೆಯಲ್ಲಿ ಗೊಂದಲ ಉಂಟಾಯಿತು.

ಕೌನ್ಸಿಲ್ ಸಭೆಯಲ್ಲಿ ಪಾಲಿಕೆ ಸದಸ್ಯೆ ಸುನಂದ ಪಾಲನೇತ್ರ ಕೌನ್ಸಿಲ್ ಸಭಾಂಗಣದ ಅವಸ್ಥೆ ಬಗ್ಗೆ ಪ್ರಸ್ತಾಪಿಸಿದರು.  ಪಾಲಿಕೆ ಒಳಗಡೆಯೇ ಎಲ್ಲಾವು ಸರಿ ಇಲ್ಲ‌. ಕೌನ್ಸಿಲ್ ಸಭಾಂಗಣದ ಯಾವ ಮೈಕ್ ಸರಿಯಾಗಿ ಕೆಲಸ ನಿರ್ವಸಿಸುತ್ತಿಲ್ಲ. ಯಾವೋಬ್ಬ ಪಾಲಿಕೆಯ ಸದಸ್ಯರ ಮಾತು ಸಹ ಕೇಳಿಸ್ತಿಲ್ಲ. ಪಾಲಿಕೆ ಕೌನ್ಸಿಲ್ ಸಭೆಯ ಸಭಾಂಗಣವೇ ಸರಿ ಇಲ್ಲ‌.‌ ಇನ್ನೂ ನಾವು ಮೈಸೂರು ನಗರವನ್ನ ಅಭಿವೃದ್ಧಿ ಪಡಿಸುವುದು ಹೇಗೆ ಎಂದು ಪ್ರಶ್ನಿಸಿದರು.

ಸಭಾಂಗಣ ಕೊಳಚೆ ಪ್ರದೇಶ ಇದ್ದ ಹಾಗೆ ಇದೆ. ಸಭಾಂಗಣ ವಿಂಡೋ ಸ್ರೀನ್ ಕೂಡ ಗಲಿಜಾಗಿದೆ ಇದು ಕೌನ್ಸಿಲ್ ಸಭಾಂಗಣವೇ ಎಂದು ಸಭಾಂಗಣದ ವ್ಯವಸ್ಥೆ ಕಂಡು ಅಧಿಕಾರಿಗಳ ವಿರುದ್ದ ಪಾಲಿಕೆ ಸದಸ್ಯರು ಕಿಡಿಕಾರಿದರು.

Keywords: Council -meeting -Mysore –city corporation-mayor-puspalathajagannath

website developers in mysore