ಕೋವಿಡ್ ಕಿಟ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲವೆಂದು ಶ್ವೇತಪತ್ರ ಹೊರಡಿಸಲಿ -ಸರ್ಕಾರಕ್ಕೆ ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಆಗ್ರಹ

ಕೋಲಾರ,ಆ,3,2020(www.justkannada.in): ಮಹಾಮಾರಿ ಕೋವಿಡ್ ಹೆಸರಿನ ನಲ್ಲಿ ಬಿಜೆಪಿ ಸರ್ಕಾರ 2 ಸಾವಿರ ಕೋಟಿ ರು. ಭ್ರಷ್ಟಾಚಾರ ನಡೆಸಿರುವ ಆರೋಪ ತಳ್ಳಿಹಾಕುವುದಾದರೆ ಕೂಡಲೇ ಸರಕಾರ ಕೋರೋನ ನಿರ್ವಹಣೆಗೆ ಖರ್ಚಿನ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಆಗ್ರಹಿಸಿದ್ದಾರೆ.

ಇಂದು ಕೋಲಾರದ ಪತ್ರಕರ್ತರ ಭವನದಲ್ಲಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್. ಜನ ಸಮುದಾಯಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಭ್ರಷ್ಟಾಚಾರ ತಿಳಿದಿದೆ. ಕೊರೋನಾ ಸಂಕಷ್ಟದಲ್ಲಿಯೂ ಬಿಜೆಪಿ ತನ್ನ ಜೇಬು ತುಂಬಿಸಿಕೊಳ್ಳುವ ಕೆಲಸ‌ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.jk-logo-justkannada-logo

ವೆಂಟಿಲೇಟರ್, ಪಿಪಿಇ ಕಿಟ್ , ಮಾಸ್ಕ್ ಖರೀದಿಯಲ್ಲೂ ಭಾರಿ ಅವ್ಯವಹಾರ ನಡೆಸಿದ್ದಾರೆ. ವೆಂಟಿಲೇಟರ್ ಖರೀದಿಗೆ 5 ರಿಂದ 18 ಲಕ್ಷ ರೂ ವ್ಯಹಿಸಿದ್ದಾರೆ.‌ ಆದರೆ, ಪಕ್ಕದ ರಾಜ್ಯದಲ್ಲಿ ಕೇವಲ 4 ಲಕ್ಷಕ್ಕೆ ವೆಂಟಿಲೇಟರ್ ಖರೀದಿ ಮಾಡಿದ್ದಾರೆ. ಇನ್ನು 9.65 ಲಕ್ಷ ಪಿಪಿಇ ಕಿಟ್ ಖರೀದಿಗೆ 2117 ರೂ. ವ್ಯಹಿಸಿದ್ದಾರೆ. ಎನ್‌95 ಮಾಸ್ಕ್‌ ಒಂದಕ್ಕೆ 150 ಕೊಟ್ಟು ಖರೀದಿಸಿದ್ದಾರೆ. ಮಾರುಕಟ್ಟೆಯಲ್ಲಿ ಗುಣಮಟ್ಟದ ಮಾಸ್ಕ್‌ ಕಡಿಮೆ ದರದಲ್ಲಿ ಲಭ್ಯವಿದ್ದರೂ ಬೇಕೆಂದೆ ದುಬಾರಿ ಮೊತ್ತದ ಮಾಸ್ಕ್‌ ಖರೀದಿಸಿ ಅವ್ಯವಹಾರ ಎಸಗಿದ್ದಾರೆ.‌ ಧರ್ಮಲ್ ಸ್ಕ್ರೀನಿಂಗ್  ನನ್ನು 5945 ರೂ. ಗೆ ಖರೀದಿಸಿದ್ದಾರೆ.  ಆರೋಗ್ಯ ಇಲಾಖೆ 7೦೦ ಕೋಟಿ , ಬಿಬಿಎಂಪಿ 2೦೦ ಕೋಟಿ , ವೈದ್ಯಾಕೀಯ ಶಿಕ್ಷಣ ಇಲಾಖೆ 850 ಕೋಟಿ, ಹಾಗೂ ಎನ್‌ಡಿಆರ್‌ಎಫ್‌‌ 743 ಕೋಟಿ ರೂ. ಸೇರಿ ಒಟ್ಟು 4167 ಕೋಟಿ ರು. ವೆಚ್ಚ ಮಾಡಲಾಗಿದೆ.  ಇದರಲ್ಲಿ 2 ಸಾವಿರ ಕೋಟಿ ಭ್ರಷ್ಟಾಚಾರ ಆಗಿದೆ. ಹೀಗಾಗಿ ಸರಕಾರ ಕೂಡಲೇ ಇದಕ್ಕೆ ಸೂಕ್ತ ಲೆಕ್ಕವನ್ನು ತೋರಿಸಲು ಶ್ವೇತ ಪತ್ರ ಹೊರಡಿಸಲಿ ಎಂದು ಪರಮೇಶ್ವರ್ ಆಗ್ರಹಿಸಿದರು.

ಇನ್ನು ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ಬಿಲ್ ಮಾಡುತ್ತಿರುವ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಸರಕಾರ ಯಾವುದೇ ಕ್ರಮ‌ಕೈಗೊಂಡಿಲ್ಲ.‌ ಅಟೋ ಚಾಲಕರು, ಕ್ಷೌರಿಕರು, ನೇಕಾರರಿಗೆ 5 ಸಾವಿರ ರೂಪಾಯಿ ಕೂಡ ಸರಿಯಾಗಿ ತಲುಪಿಲ್ಲ‌. ಕಾರ್ಮಿಕರು ಸೇರಿದಂತೆ ಲಕ್ಷಾಂತರ ಜನ ಬೆಂಗಳೂರು ಬಿಟ್ಟಿದ್ದಾರೆ. ಆದರೆ 80 ಲಕ್ಣ ಜನರಿಗೆ ಆಹಾರ ಸಾಮಾಗ್ರಿ ಕೊಟ್ಟಿರುವ‌ ಲೆಕ್ಕ ಕೊಡುತ್ತಿದ್ದಾರೆ. ಕೆಪಿಸಿಸಿ ಯಿಂದ 1 ಕೊಟಿ ರೂಪಾಯಿ ಕೊಟ್ಟರೆ ಅವಮಾನ ಆಗುತ್ತದೆಂದು ಅದನ್ನು ಪಡೆದಿಲ್ಲ ಎಂದರು ಎಂದು ಪರಮೇಶ್ವರ್ ಹರಿಹಾಯ್ದರು.

ಸಮುದಾಯಕ್ಕೆ ಹರಡಲು ಸರಕಾರ ಕಾರಣ:corruption-purchase-covid-kit-former-dcm-dr-g-parameshwar

ಕೊರೋನ ದಿನೇದಿನೆ ಹೆಚ್ವುತ್ತಿದೆ. ಕೋರೋನ‌ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ. ಕೋರೋನ ಹೆಚ್ಚಳದಿಂದ ಜಮರು ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಸಾವನ್ನಪ್ಪುತ್ತಿದ್ದಾರೆ.‌ಈ ಎಲ್ಲದಕ್ಕೂ ನೇರ ಹೊಣೆ ಈ ಸರಕಾರ ಎಂದು ಪರಮೇಶ್ವರ್ ವಾಗ್ದಾಳಿ ನಡೆಸಿದರು.

ಶೀಘ್ರ ಗುಣಮುಖರಾಗಲಿ:

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೊರೋನ ಕಾಣಿಸಿಕೊಂಡಿರುವುದು ಬೇಸರ ತರಿಸಿದೆ, ಅವರು ಶೀಘ್ರವೇ ಗುಣಮುಖರಾಗಿ ಹಿಂದಿರುಗಲಿ‌ ಎಂದು ಆಶಿಸುತ್ತೇವೆ  ಎಂದು ಮಾಜಿ ಡಿಸಿಎಂ ಪರಮೇಶ್ವರ್ ಹಾರೈಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ ಭಾಗಿಯಾಗಿದ್ದರು.

Key words: corruption – purchase – covid kit-Former DCM -Dr.G. Parameshwar