ಕಾಂಗ್ರೆಸ್ ಮುಕ್ತ ಭಾರತದ ಜತೆಯಲ್ಲೇ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣ- ಡಿಸಿಎಂ ಅಶ್ವಥ್ ನಾರಾಯಣ್…

Promotion

ಮಾಗಡಿ,ಡಿಸೆಂಬರ್,10,2020(www.justkannada.in):  ಕಾಂಗ್ರೆಸ್ ಪಕ್ಷವೆಂದರೆ ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತ. ಕಾಂಗ್ರೆಸ್ ಪಕ್ಷವೆಂದರೆ ಭ್ರಷ್ಟಾಚಾರ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಕ್ತ ಭಾರತದ ಗುರಿ ಸಾಧಿಸುವುದರ ಜತೆಜತೆಯಲ್ಲೇ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣ ಮಾಡುವ ದರಲ್ಲಿ ಬಿಜೆಪಿ ಯಶಸ್ವಿಯಾಗಲಿದೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.corruption-free-india-built-congress-free-india-dcm-ashwath-narayan

ಮಾಗಡಿಯಲ್ಲಿ ಗುರುವಾರ ಬೆಳಗ್ಗೆ ಹಿರಿಯ ಮುಖಂಡ ಎಚ್.ಎಂ.ಕೃಷ್ಣಮೂರ್ತಿ ಅವರನ್ನು ಬಿಜೆಪಿಗೆ ಬರಮಾಡಿಕೊಂಡ ನಂತರ ಸಭೆಯಲ್ಲಿ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ಅಭಿವೃದ್ಧಿಪರ ಕಾರ್ಯಕ್ರಮಗಳ ಪ್ರವಾಹದಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗುತ್ತಿದೆ. ದೇಶದ ಜನರ ನಾಡಿಮಿತಕ್ಕೆ ತಕ್ಕಂತೆ ಬಿಜೆಪಿ ಕೆಲಸ ಮಾಡುತ್ತಿರುವ ಕಾರಣಕ್ಕಾಗಿಯೇ ದೇಶಾದ್ಯಂತ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುತ್ತಿದ್ದಾರೆ ಎಂದರು.

ಎಲ್ಲ ಹಂತಗಳಲ್ಲೂ ಭ್ರಷ್ಟಾಚಾರ ಬೇರೂರಿತ್ತು. ಅದನ್ನು ಈಗ ಬುಡಸಮೇತ ಕಿತ್ತೊಗೆಯಲಾಗುತ್ತಿದೆ. ಬಚ್ಚಿಟ್ಟಿದ್ದ ಕಪ್ಪು ಹಣ ರಾಶಿರಾಶಿಯಾಗಿ ಹೊರಬರುತ್ತಿದೆ. ದೇಶದ ಆರ್ಥಿಕತೆಯಲ್ಲಿ, ಜಾರಿಯಾಗುತ್ತಿರುವ ಯೋಜನೆಗಳಲ್ಲಿ ಪಾರದರ್ಶಕತೆ ಬಂದಿದೆ. ಈ ಕಾರಣದಿಂದ ಮುಂದಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಜನರು ಕಾಂಗ್ರೆಸ್ ಪಕ್ಷವನ್ನು ತಮ್ಮತಮ್ಮ ಗ್ರಾಮಗಳಿಂದ ಹೊರ ಹಾಕಲಿದ್ದಾರೆಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಹೇಳಿದರು.corruption-free-india-built-congress-free-india-dcm-ashwath-narayan

ಬಿಜೆಪಿ ಎಲ್ಲರ ಪಕ್ಷ:

ಭಾರತೀಯ ಜನತಾ ಪಕ್ಷವು ಕೇವಲ ರಾಜಕೀಯ ಪಕ್ಷವಲ್ಲ. ಅದು ಸಮಸ್ತ ಭಾರತೀಯರ ಜನಜೀವನದ ಒಂದು ಭಾಗ. ನಮ್ಮತನವನ್ನು ಎತ್ತಿ ಹಿಡಿಯುವ ಪಕ್ಷ. ಪ್ರತಿಯೊಬ್ಬರಿಗೂ ಸಲ್ಲುವ ಏಕೈಕ ರಾಜಕೀಯ ಪಕ್ಷ, ಜನರ ಭಾವನೆಗಳನ್ನು ಗೌರವಿಸುತ್ತಿರುವ ಪಕ್ಷ ಮಾತ್ರ. ಸಿಐಐಎ, ತ್ರಿವಳಿ ತಲಾಕ್, ಜಮ್ಮು ಮತ್ತು ಕಾಶ್ಮೀರದ 370 ರದ್ದು ಸೇರಿದಂತೆ ಅನೇಕ ಜಟಿಲ ಸಮಸ್ಯೆಗಳನ್ನು ರಾಜಕೀಯ ಇಚ್ಛಾಶಕ್ತಿಯಿಂದ ಬಗೆಹರಿಸಿದ ಪಕ್ಷವೆಂದರೆ ಅದು ಬಿಜೆಪಿ ಮಾತ್ರ. ಈ ಕಾರಣಕ್ಕಾಗಿ ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಎಚ್.ಎಂ.ಕೃಷ್ಣಮೂರ್ತಿ ಹಿಂದೆ ನಮ್ಮ ಪಕ್ಷದಲ್ಲೇ ಇದ್ದರು. ಪುನಾ ಮಾತೃಪಕ್ಷಕ್ಕೆ ವಾಪಸ್ ಬಂದಿದ್ದಾರೆ. ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಕೃಷ್ಣಮೂರ್ತಿ ಅವರ ಮರು ಸೇರ್ಪಡೆ ಪಕ್ಷಕ್ಕೆ ಬಲ ತಂದಿದೆ ಎಂದು ಡಿಸಿಎಂ ನುಡಿದರು.

ಇದೇ ವೇಳೆ ಮಾತನಾಡಿದ ಎಚ್.ಎಂ.ಕೃಷ್ಣಮೂರ್ತಿ, ಮಾತೃಪಕ್ಷ ಬಿಜೆಪಿಗೆ ಮರಳುತ್ತಿರುವುದು ಖುಷಿ ತಂದಿದೆ. ಇಡೀ ದೇಶದಲ್ಲಿ ಬಿಜೆಪಿಗೆ ಹೆಚ್ಚು ಮಾನ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಜಗಮೆಚ್ಚಿದ ಮಗ. ಅಂತಹ ಪಕ್ಷಕ್ಕೆ ಮರಳಿದ್ದು ಹೆಮ್ಮೆಯ ಸಂಗತಿ ಎಂದರು.

ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ, ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ಮುಖ್ಯಸ್ಥ ಬಸವರಾಜ, ಮಂಡಲ ವಿಭಾಗದ ಅಧ್ಯಕ್ಷ ಧನಂಜಯ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮುನ್ನ ಡಿಸಿಎಂ ಅವರು ಮಾಗಡಿಯಲ್ಲಿನ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರ ಸಮರ್ಪಿಸಿದರು.

English summary….

We will build a corruption free India along with Congress free India – DCM Ashwathnarayan
Magadi, Dec. 02, 2020 (www.justkannada.in): “Congress means family politics, nepotism. Congress means corruption. Hence, creating corruption-free and Congress-free India is our aim,” opined Dr. C.N. Ashwathnarayan, Deputy Chief Minister and Ramanagara District In-charge Minister.corruption-free-india-built-congress-free-india-dcm-ashwath-narayan
He welcomed senior leader H.M. Krishnamurthy to BJP at a function held at Magadi today. In his address, the DCM opined that before Prime Minister Sri Narendra Modi took charge at the center corruption was deep-rooted at every level. Due to his vision and efforts corruption is being uprooted. Black money was exposed and transparency is visible in all the economical programmes of the country. As a result of all these good works, people will reject the Congress party even in the coming Gram Panchayat elections.
Keywords: Corruption free/ Congress free India/ DCM/ Ashwathnarayan

Key words:  corruption free- India – built – Congress free –India- DCM- Ashwath Narayan.