ಬ್ರಿಟನ್ ಬಂದ 33 ಮಂದಿಗೆ ಕೊರೋನಾ ಸೋಂಕು… 

Promotion

ಬೆಂಗಳೂರು,ಜನವರಿ,1,2021(www.justkannada.in):  ಬ್ರಿಟನ್ ನಿಂದ ಬಂದಿರುವ 33 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇವರ ಸಂಪರ್ಕದಲ್ಲಿದ್ಧ 5 ಮಂದಿಗೆ ಕೊರೋನಾ ತಗುಲಿದ್ದು ಒಟ್ಟು 38 ಮಂದಿಗೆ ಪಾಸಿಟಿವ್ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದರು.jk-logo-justkannada-mysore

ಈ ಕುರಿತು ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವ ಸುಧಾಕರ್, ರಾಜ್ಯದಲ್ಲಿ ರೂಪಾಂತರ ಕೊರೊನಾ ವೇಗವಾಗಿ ಹರಡುತ್ತಿದ್ದು, ಬ್ರಿಟನ್ ನಿಂದ ಬಂದ  70 ಜನರ ಬಗ್ಗೆ ಇನ್ನೂ ಮಾಹಿತಿ ಸಿಗುತ್ತಿಲ್ಲ. ಇಂದು ಅಥವಾ ನಾಳೆ ಮಾಹಿತಿ ಸಿಗುವ ವಿಶ್ವಾಸವಿದೆ. ಬ್ರಿಟನ್ ನಿಂದ ಬಂದಿರುವ 33 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅವರ ಸಂಪರ್ಕದಲ್ಲಿದ್ದ 5 ಜನರಿಗೂ ಸೋಂಕು ಹರಡಿದ್ದು, ಒಟ್ಟು 38 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದರು.coronavirus-infects-33-britain-minister-sudhakar

ಇದೇ ವೇಳೆ ಕೇಂದ್ರದ ಸೂಚನೆ ಹಿನ್ನೆಲೆಯಲ್ಲಿ ನಾಳೆಯಿಂದ 5 ಜಿಲ್ಲೆಗಳಲ್ಲಿ ಕೊರೊನಾ ಲಸಿಕೆ ಡ್ರೈರನ್ ಆರಂಭಿಸಲಾಗುತ್ತಿದೆ ಎಂದು  ಸಚಿವ ಸುಧಾಕರ್ ತಿಳಿಸಿದರು.

Key words: Coronavirus -infects -33 – Britain-minister -sudhakar