ದೇಶದಲ್ಲಿ ಒಂದೇ ದಿನ 2,11,298 ಮಂದಿಗೆ ಕೊರೋನಾ ಸೋಂಕು…

Promotion

ನವದೆಹಲಿ,ಮೇ,27ಮ2021(www.justkannada.in):  ದೇಶದಲ್ಲಿ ದಿನದ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದು 24 ಗಂಟೆಗಳಲ್ಲಿ 2,11,298  ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದೆ.jk

ಇತ್ತೀಚೆಗೆ ದಿನೇ ದಿನೇ  ಒಂದು ದಿನದ ಸೋಂಕಿತರ ಸಂಖ್ಯೆ 3 ಲಕ್ಷ ಗಡಿ ದಾಟುತ್ತಿತ್ತು. ಇದೀಗ ಈ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 2,11,298 ಮಂದಿಗೆ ಹೊಸದಾಗಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 2,73,69,093 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 3,847 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದು, ಈ ಮೂಲಕ ಸಾವನ್ನಪ್ಪಿದವರ ಸಂಖ್ಯೆ 3,15,235 ಕ್ಕೆ ಏರಿಕೆಯಾಗಿದೆ.coronavirus-detects-2-59-lakh-people-single-day

ದೇಶದಲ್ಲಿ ಒಟ್ಟು 2,46,33,951 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ 24,19,907 ಸಕ್ರಿಯ ಪ್ರಕರಣಗಳಿವೆ. 20,26,95,874 ಮಂದಿಗೆ ಲಸಿಕೆ ಹಾಕಲಾಗಿದೆ.

Key words: Coronavirus- infects -2,11,298 people – single day-india