‘ಮೆಗಾ ಸ್ಟಾರ್‌’ ಚಿರಂಜೀವಿಗೂ ಅಂಟಿದ ಕೊರೊನಾ ಸೋಂಕು

Promotion

ಬೆಂಗಳೂರು, ನವೆಂಬರ್ 10, 2020 (www.justkannada.in): ಟಾಲಿವುಡ್‌ ‘ಮೆಗಾ ಸ್ಟಾರ್‌’ ಚಿರಂಜೀವಿ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಆಗಿದೆ. ವಿಚಾರವನ್ನು ಅವರೇ ಸೋಮವಾರ (ನ.9) ಬಹಿರಂಗಪಡಿಸಿದ್ದಾರೆ.

ಈಗ ಪುನಃ ಶೂಟಿಂಗ್ ಆರಂಭಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಅಷ್ಟರಲ್ಲೇ ಅವರಿಗೆ ಕೊರೊನಾ ಪಾಸಿಟಿವ್ ಆಗಿರುವುದು ಗೊತ್ತಾಗಿದೆ.

‘ನಿಯಮಗಳ ಪ್ರಕಾರ, ‘ಆಚಾರ್ಯ’ ಸಿನಿಮಾದ ಶೂಟಿಂಗ್ ಆರಂಭ ಮಾಡುವುದಕ್ಕೂ ಮುನ್ನ ಕೊರೊನಾ ಟೆಸ್ಟ್ ಮಾಡಿಸಿಕೊಂಡೆ. ದುರಾದೃಷ್ಟಕ್ಕೆ ನನಗೆ ಕೊರೊನಾ ಪಾಸಿಟಿವ್ ಆಗಿದೆ ಎಂದು ಚಿರು ಮಾಹಿತಿ ನೀಡಿದ್ದಾರೆ.

ಸದ್ಯಕ್ಕೆ ಯಾವುದೇ ರೋಗ ಲಕ್ಷಣಗಳು ಇಲ್ಲ. ಮನೆಯಲ್ಲೇ ಕ್ವಾರಂಟೇನ್ ಆಗಿದ್ದೇನೆ. ಕಳೆದ ಐದು ದಿನಗಳಲ್ಲಿ ನನ್ನೊಂದಿಗೆ ಯಾರೆಲ್ಲ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದೀರೋ, ಅವರೆಲ್ಲ ಟೆಸ್ಟ್ ಮಾಡಿಸಿಕೊಳ್ಳಿ..’ ಎಂದು ಮನವಿ ಮಾಡಿದ್ದಾರೆ.