ಇಂಗ್ಲೆಂಡಿನ ಆರೋಗ್ಯ ಸಚಿವೆಗೇ ಕೊರೊನಾ ವೈರಸ್ ಸೋಂಕು !

ಲಂಡನ್, ಮಾರ್ಚ್ 11, 2020 (www.juskannada.in): ಇಂಗ್ಲೆಂಡಿನ ಆರೋಗ್ಯ ಸಚಿವೆಗೇ ಕೊರೊನಾ ವೈರಸ್ ಸೋಂಕು ತಗುಲಿದೆ.

ಇಂಗ್ಲೆಂಡಿನ ಆರೋಗ್ಯ ಸಚಿವೆ ನಾಡಿನ್ ಡೋರಿಸ್ ನಿನ್ನೆ ಹೇಳಿಕೆ ಬಿಡುಗಡೆ ಮಾಡಿ ತಮಗೆ ಕೊರೊನಾ ಸೋಂಕು ತಗುಲಿದ್ದು, ಸರ್ಕಾರದ ಹಿರಿಯ ಅಧಿಕಾರಿಗಳು, ಸಚಿವರುಗಳಿಗೂ ತಗುಲಿರಬಹುದೇ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನನ್ನಲ್ಲಿ ಕೊರೊನಾ ವೈರಸ್ ದೃಢಪಟ್ಟಿದೆ. ಸ್ವ ನಿರ್ಬಂಧನೆ ಹಾಕಿ ಮನೆಯೊಳಗೆ ಕೂತಿದ್ದೇನೆ. ನನಗೆ ಎಲ್ಲಿಂದ ಸೋಂಕು ತಗುಲಿರಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ ಎಂದು ಸಚಿವೆ ಹೇಳಿದ್ದಾರೆ.

ಇಂಗ್ಲೆಂಡಿನಲ್ಲಿ ಇದುವರೆಗೆ 6 ಮಂದಿ ಕೊರೊನಾ ವೈರಸ್ ಗೆ ಮೃತಪಟ್ಟಿದ್ದು 370ಕ್ಕೂ ಹೆಚ್ಚು ಮಂದಿಯಲ್ಲಿ ಪತ್ತೆಯಾಗಿದೆ. ಇಂಗ್ಲೆಂಡಿನ ರಾಜಕಾರಣಿಯೊಬ್ಬರಿಗೆ ಇದೇ ಮೊದಲ ಸಲ ಕೊರೊನಾ ವೈರಸ್ ಬಂದಿದ್ದು ಅವರು ಪ್ರತಿನಿತ್ಯ ನೂರಾರು ಜನರ ಜೊತೆ ಸಂಪರ್ಕದಲ್ಲಿದ್ದರು.

ಅವರಲ್ಲಿ ಪ್ರಧಾನಿ ಬೊರಿಸ್ ಜಾನ್ಸನ್ ಕೂಡ ಒಬ್ಬರಾಗಿದ್ದಾರೆ. ಕಳೆದ ಶುಕ್ರವಾರ ಸಚಿವೆಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಈಗ ಗುಣಮುಖರಾಗುತ್ತಿದ್ದಾರೆ.