ಕರೋನಾ ಪಾಸಿಟಿವ್ : ದೇಶದ ಗಮನ ಸೆಳೆದ ಕರ್ನಾಟಕದ ಇಂದಿನ ಸೋಂಕಿರ ದಾಖಲೆ ಸಂಖ್ಯೆ…

 

ಬೆಂಗಳೂರು, ಮೇ 19, 2020 : ( www.justkannada.in news ) ದೇಶದಲ್ಲಿ ಲಾಕ್‌ಡೌನ್ 4.0 ಜಾರಿಗೊಂಡಿದ್ದರು ಸಹ ಭಾರತದಲ್ಲಿ ಕರೋನವೈರಸ್ ಸೋಂಕಿತರ ಸಂಖ್ಯೆ 1 ಲಕ್ಷ ದಾಟಿದೆ. ಜತೆಗೆ COVID 19 ಸಾವಿನ ಸಂಖ್ಯೆ 3,164 ತಲುಪಿರುವುದು ಆತಂಕಕ್ಕೆ ಎಡೆಮಾಡಿದೆ.

ಈ ಪೈಕಿ ಕರ್ನಾಟಕದಲ್ಲಿ ಇಂದು ಪತ್ತೆಯಾದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿಗಿಲು ಹುಟ್ಟಿಸುವಂತಿದೆ. ಮಂಗಳವಾರ ಒಂದೇ ದಿನ ಕರ್ನಾಟಕದಲ್ಲಿ 127 ಕರೋನಾ ಪಾಸಿಟಿವ್ ಪ್ರಕರಣ ಧೃಢಪಟ್ಟಿದೆ. ಇದು ರಾಜ್ಯ ಮಾತ್ರವಲ್ಲದೆ ದೇಶದ ಗಮನ ಸೆಳೆದಿದ್ದು, ರಾಷ್ಟ್ರೀಯ ಸುದ್ದಿ ಮಾಧ್ಯಮಗಳಲ್ಲಿ ‘ Coronavirus India update: Karnataka records biggest single day spike ‘ ಎಂದು ಹೆಡ್ ಲೈನ್ಸ್ ನಲ್ಲಿ ಪ್ರಾಮುಖ್ಯತೆ ಪಡೆದಿದೆ.

Coronavirus -India update- Karnataka records biggest single day spike- 127 COVID-19 cases reported -in a single day.

ರಾಜ್ಯದಲ್ಲಿ ಇಂದು ಪತ್ತೆಯಾದ 127 ಹೊಸ ಪ್ರಕರಣಗಳ ಪೈಕಿ ಮಂಡ್ಯ 62, ದಾವಣಗೆರೆ 19, ಯಾದಗಿರಿ 01, ಕಲಬುರಗಿ 11, ಬೆಂಗಳೂರು 06, ಉಡುಪಿ 04, ಚಿಕ್ಕಮಗಳೂರು 02, ಗದಗ 01, ಚಿತ್ರದುರ್ಗ 01, ಬಿಜಾಪುರ 01, ಶಿವಮೊಗ್ಗ 12, ಹಾಸನ 03, ಉತ್ತರಕನ್ನಡ 04 ಸೇರಿದೆ. ಇದರಿಂದ ಕರ್ನಾಕಟದಲ್ಲಿ ಕೋವಿಡ್ ಪಾಸಿಟಿವ್ ಸೋಂಕಿತರ ಸಂಖ್ಯೆ 1373 ಕ್ಕೆ ಏರಿಕೆಯಾಗಿದೆ.

@ ದೇಶದಲ್ಲಿ :

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿಯ ಪ್ರಕಾರ ಒಟ್ಟು 58,802 ಸಕ್ರಿಯ ಕೊರೊನಾವೈರಸ್ ಪ್ರಕರಣಗಳಿವೆ, ಈ ಪೈಕಿ 39,173 ಗುಣಮುಖವಾಗಿವೆ, 3163 ಸಿಒವಿಐಡಿ 19 ಸಕಾರಾತ್ಮಕ ರೋಗಿಗಳು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ವಲಸೆ ಹೋಗಿದ್ದಾರೆ.

ಪ್ರಪಂಚದಾದ್ಯಂತ, ಸುಮಾರು 48 ಲಕ್ಷ ಕೊರೊನಾವೈರಸ್ ಪ್ರಕರಣಗಳು 3.15 ಲಕ್ಷಕ್ಕೂ ಹೆಚ್ಚು ಕೋವಿಡ್ 19 ಸಾವುಗಳು ಸಂಭವಿಸಿವೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮತ್ತು ಮೆಡಿಸಿನ್ ಕೊರೊನಾವೈರಸ್ ಸಂಪನ್ಮೂಲ ಕೇಂದ್ರ ತಿಳಿಸಿದೆ.

 

KEY WORDS : Coronavirus -India update- Karnataka records biggest single day spike- 127 COVID-19 cases reported -in a single day.


Coronavirus India update: Karnataka records biggest single day spike. 127 COVID-19 cases reported today in Karnataka. This is the highest spike in cases in the state in a single day.