ಮಾರ್ಚ್ ಅಂತ್ಯದ ವೇಳೆಗೆ ಕೊರೋನಾ ಸೋಂಕು ಹತೋಟಿಗೆ ಬಾರದಿದ್ರೆ ಪರೀಕ್ಷೆ ರದ್ಧು- ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಜಗದೀಶ್ ಸ್ಪಷ್ಟನೆ…

Promotion

ಬೆಂಗಳೂರು,ಮಾ,16,2020(www.justkannada.in):  7 ರಿಂದ 9ನೇ ತರಗತಿವರೆಗೆ ಪರೀಕ್ಷೆ ನಡೆಸುವ ವಿಚಾರ ಸಂಬಂಧ ಮಾರ್ಚ್ ಅಂತ್ಯದ ವೇಳೆಗೆ ಕೊರೋನಾ ಸೋಂಕು ಹತೋಟಿಗೆ ಬಾರದಿದ್ರೆ ಪರೀಕ್ಷೆ ರದ್ಧು ಮಾಡುತ್ತೇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಜಗದೀಶ್ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಇಂದು ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಜಗದೀಶ್, ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದರೇ ಪರೀಕ್ಷೆ ನಡೆಸುತ್ತೇವೆ. ಮಾರ್ಚ್ 31ರವರೆಗೆ ಯಾವುದೇ ಪರೀಕ್ಷೆ ನಡೆಸದಂತೆ ಸೂಚಿಸಿದ್ದೇವೆ. ಮಾರ್ಚ್ ಅಂತ್ಯದ ವೇಳೆಗೆ ಕೊರೋನಾ ಸೋಂಕು ಕಡಿಮೆಯಾದರೇ 7ರಿಂದ 9ನೇ ತರಗತಿಯ ಪರೀಕ್ಷೆ ನಡೆಸುತ್ತೇವೆ. ಸೋಂಕು ಹತೋಟಿಗೆ ಬಾರದಿದ್ರೆ ಪರೀಕ್ಷೆ ರದ್ದುಮಾಡಿ, ಹಿಂದಿನ ಪರೀಕ್ಷೆ ಆಧಾರದ ಮೇಲೆ ಗ್ರೇಡಿಂಗ್ ನೀಡುತ್ತೇವೆ ಎಂದು ತಿಳಿಸಿದರು.

ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವ ಬಗ್ಗೆ ಪೂರ್ವಭಾವಿ ಸಭೆ ನಡೆಸುತ್ತೇವೆ ಎಂದು ಕಲ್ಬುರ್ಗಿ ಜಿಲ್ಲಾಧಿಕಾರಿ ಬಿ.ಶರತ್ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಜಗದೀಶ್  ಕಲ್ಬುರ್ಗಿ ಜಿಲ್ಲಾಧಿಕಾರಿ ಸಭೆ ನಡೆಸಿ ನಂತರ ನಮಗೆ ವರದಿ ನೀಡಲಿ. ಕಲ್ಬರ್ಗಿ ಡಿಸಿ ವರದಿ ನೀಡಿದ ಬಳಿಕ ಪರೀಕ್ಷೆ ನಡೆಸುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ . ಪರೀಕ್ಷೆ ನಡೆಸಬೇಕೆ  ಮುಂದೂಡಬೇಕೆ ಎಂಬುದು ನಿರ್ಧಾರ ಮಾಡಲಾಗುತ್ತದೆ.  ಸದ್ಯ 27 ರಿಂದ ಎಸ್ ಎಸ್ ಎಲ್ ಸಿಪರೀಕ್ಷೆ ಆರಂಭವಾಗಲಿದೆ. ಕಲ್ಬುರ್ಗಿಯಲ್ಲಿ ಕೊರೋನಾ ಭೀತಿ ಹೆಚ್ಚಾಗಿದೆ. ಹೀಗಾಗಿ ಈ ಬಗ್ಗೆ ಶಿಕ್ಷಣ ಸಚಿವರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

Key words: Coronavirus -end –March-exam-of Public Education   Department -Commissioner -Jagadeesh