Promotion
ಮೈಸೂರು, ಮಾರ್ಚ್ 15, 2020 (www.justkannada.in):ಕರೋನ ಭೀತಿಯಿಂದ ಒಂದು ವಾರಗಳ ಕಾಲ ಅರಮನೆ ಬಂದ್ ಹಿನ್ನೆಲೆಯಲ್ಲಿ ಜನರಿಲ್ಲದೇ ಅರಮನೆ ಆವರಣ ಬಣಗುಡುತ್ತಿದೆ.
ಅರಮನೆ ಗೇಟ್ ನಲ್ಲಿ ಹಾಕಿರು ನೋಟಿಸ್ ಬೋರ್ಡ್ ನೋಡಿ ಬಂದ ಕೆಲವೇ ಮಂದಿ ವಾಪಸಾಗುತ್ತಿದ್ದಾರೆ. ಹೊರಗಡೆಯಿಂದಲೇ ಸೆಲ್ಪಿ ತೆಗೆದುಕೊಂಡು ನಿರಾಸೆಯಿಂದ ಹಿಂದಿರುಗುತ್ತಿರುವ ಪ್ರವಾಸಿಗರು.
ಇನ್ನು ಪ್ರವಾಸಿಗರಿಗಲ್ಲದೇ ಆಟೋ, ಟ್ಯಾಕ್ಸಿ ಚಾಲಕರು ನಷ್ಟ ಅನುಭವಿಸುತ್ತಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಮನೆಯಿಂದ ಹೊರ ಬರದ ಜನ. ದಿನದ ಬಾಡಿಗೆಯನ್ನೇ ನಂಬಿ ಬದುಕುವ ಚಾಲಕರಿಗೆ ಕೊರೊನಾ ಸಂಕಷ್ಟಕ್ಕೀಡು ಮಾಡಿದೆ.
ಮೈಸೂರಿನ ಸಿಟಿ ಬಸ್ ಸ್ಟಾಪ್, ಸಬರ್ಬ್ ಸ್ಟಾಪ್, ರೈಲು ನಿಲ್ದಾಣ ಸೇರಿದಂತೆ ಹಲವು ಭಾಗಗಳಲ್ಲಿ ಪ್ರಯಾಣಿಕರಿಲ್ಲದೆ ಆಟೋಗಳು ಖಾಲಿ ಖಾಲಿ. ಬಾಡಿಗೆಯಿಲ್ಲದೆ ಟ್ಯಾಕ್ಸಿ, ಆಟೋ ಚಾಲಕರು ಖಾಲಿ ಕುಳಿತುಕೊಳ್ಳುತ್ತಿದ್ದಾರೆ.