ದೇಶದಲ್ಲಿ 19 ಲಕ್ಷ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ..

Promotion

ನವದೆಹಲಿ,ಆ,4,2020(www.justkannada.in):  ದೇಶದಲ್ಲಿ ಕೊರೋನಾ ಮಹಾಮಾರಿ ಅಬ್ಬರಿಸುತ್ತಿದ್ದು ಈ ನಡುವೆ ಒಂದೇ ದಿನ 52,509 ಮಂದಿಯಲ್ಲಿ ಹೊಸದಾಗಿ ಕೊರೋನಾ ಸೋಂಕು  ದೃಢಪಟ್ಟಿದೆ.jk-logo-justkannada-logo

ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ  ಮಾಹಿತಿ ನೀಡಿದ್ದು  ಈ ಮೂಲಕ ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 19,08,255ಕ್ಕೆ  ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ  ಕೊರೋನಾ ಸೋಂಕಿನಿಂದ 857 ಮಂದಿಯನನು ಬಲಿಯಾಗಿದ್ದು, ಇದರೊಂದಿಗೆ  ಕೋವಿಡ್ -19 ಗೆ ಸಾವನ್ನಪ್ಪಿದವರ ಸಂಖ್ಯೆ 39,795ಕ್ಕೆ ಏರಿಕೆಯಾಗಿದೆ.coronavirus-country-crossed-19-lakhs

19,08,255 ಮಂದಿ ಸೋಂಕಿತರ ಪೈಕಿ ಈವರೆಗೆ 12,82,216 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.  ಇನ್ನೂ ದೇಶದಲ್ಲಿ 5,86,244  ಕೊರೋನಾ ಸಕ್ರಿಯ ಪ್ರಕರಣಗಳಿವೆ.

Key words:   coronavirus- country –crossed- 19 lakhs.