ಪಾದರಾಯನಪುರ ಕಾರ್ಪೋರೇಟರ್ ಗೆ ಕೊರೋನಾ ಸೋಂಕು ದೃಢ ಹಿನ್ನೆಲೆ: ಆಸ್ಪತ್ರೆಗೆ ಕರೆದೊಯ್ಯಲು ಆಗಮಿಸಿದ ಅಧಿಕಾರಿಗಳ ತಂಡ…

Promotion

ಬೆಂಗಳೂರು,ಮೇ,30,2020(www.justkannada.in):  ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾರಿಗೆ ಕೊರೋನಾ ಸೋಂಕು ದೃಢ ಹಿನ್ನೆಲೆ ಅವರನ್ನ ಕರೆದೊಯ್ಯಲು ಮನೆ ಮುಂದೆ ಅಧಿಕಾರಿಗಳ ತಂಡ ಆಗಮಿಸಿದ್ದಾರೆ.

ಪಾದರಾಯನಪುರದಲ್ಲಿರುವ ಕಾರ್ಪೋರೇಟರ್ ಇಮ್ರಾನ್ ಪಾಷಾ ಅವರ ಮನೆ ಮುಂದೆ ಆರೋಗ್ಯಾಧಿಕಾರಿಗಳ ಜತೆ ಅಧಿಕಾರಿಗಳು ಮತ್ತು ಪೊಲೀಸರು ಆಗಮಿಸಿದ್ದು ಕಾರ್ಪೋರೇಟರ್ ಇಮ್ರಾನ್ ಪಾಷಾ ಅವರನ್ನ ಕರೆದೊಯ್ಯಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಈ ನಡುವೆ ಆ್ಯಂಬುಲೆನ್ಸ್ ಸಹ ಮನೆ ಬಳಿಗೆ ಆಗಮಿಸಿದೆ.

Key words: Coronavirus-  confirmed -Padayanapura -corporator