ಕೊರೊನಾ ಸಂಕಷ್ಟ : ಸಾರಿಗೆ ಸಂಸ್ಥೆ ನೌಕರರ ಸಂಬಳ ಸರಕಾರವೇ ನೀಡುವಂತೆ ಮನವಿ-ಸಚಿವ ಲಕ್ಷ್ಮಣ ಸವದಿ 

kannada t-shirts

ಬೆಂಗಳೂರು,ಅಕ್ಟೋಬರ್,28,2020(www.justkannada.in) : ಲಾಕ್‌ಡೌನ್‌ನ ಸಂದರ್ಭದಲ್ಲಿ ಆರು ತಿಂಗಳು ಸಾರಿಗೆ ನೌಕರರ ಸಂಬಳವನ್ನು ಸರಕಾರವೇ ನೀಡಿದೆ. ಇನ್ನೂ ನೆರವು ಮುಂದುವರಿಸಬೇಕು ಎಂದು ಮನವಿ ಮಾಡುವುದಾಗಿ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.jk-logo-justkannada-logoಕೊರೊನಾ ಹಿನ್ನೆಲೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ನಷ್ಟದಲ್ಲಿವೆ. ಹೀಗಾಗಿ, ಮುಂದಿನ ಜನವರಿವರೆಗೆ ನೌಕರರ ಸಂಬಳಕ್ಕೆ ಅನುಕೂಲ ಕಲ್ಪಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾಹಿತಿ ನೀಡಿದ್ದಾರೆ.

ಬಸ್‌ ಪಾಸ್‌ ಸೌಲಭ್ಯಕ್ಕೆ 2,960 ಕೋಟಿ ರೂ. ನೀಡುವಂತೆ ಮನವಿ 

ಕೋವಿಡ್‌ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆ ನಷ್ಟಕ್ಕೆ ತುತ್ತಾಗಿದ್ದು, ಇಂದು 3 ಸಾವಿರ ಕೋಟಿ ರೂ.ನಷ್ಟು ವಿದ್ಯಾರ್ಥಿಗಳ ಬಸ್‌ಪಾಸ್‌ಗೆ ಖರ್ಚು ಮಾಡುತ್ತಿದೆ. ಸಾರಿಗೆ ಸಂಸ್ಥೆಯಿಂದ ನೀಡುವ ಬಸ್‌ ಪಾಸ್‌ ಸೌಲಭ್ಯಕ್ಕೆ 2,960 ಕೋಟಿ ರೂ.ಗಳನ್ನು ಸರಕಾರ ಸಾರಿಗೆ ಸಂಸ್ಥೆಗೆ ನೀಡಿದರೆ ನಷ್ಟ ಸ್ವಲ್ಪ ಮಟ್ಟಿಗೆ ಸರಿದೂಗಿದಂತಾಗುತ್ತದೆ ಎಂದಿದ್ದಾರೆ.Corona-Hardship-Transport-company-employees-appeal-salary- Minister-Lakshmana Sawadi

key words : Corona-Hardship-Transport-company-employees-appeal-salary- Minister-Lakshmana Sawadi

website developers in mysore