“ಕೊರೊನಾ 2ನೇ ಅಲೆ ಆರಂಭ, ತಜ್ಞರ ಸಲಹೆ ಪಾಲಿಸದಿದ್ದರೆ ಮುಂದೆ ಕಷ್ಟ” : ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ

ಬೆಂಗಳೂರು,ಮಾರ್ಚ್,21,2021(www.justkananda.in) : ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ರಾಜ್ಯದ ಜನರ ನಡವಳಿಕೆ ಬದಲಾಗಬೇಕು. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ತಜ್ಞರ ಸಲಹೆ ಪಾಲಿಸದಿದ್ದರೆ ಮುಂದೆ ಕಷ್ಟವಾಗಲಿದೆ ಎಂದು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

jk

ಕೊರೊನಾ ಹೆಚ್ಚಳವಾಗುತ್ತಿದ್ದು, ಶಾಲಾ,ಕಾಲೇಜುಗಳ ಬಗ್ಗೆಯೂ ಸಲಹೆ ಬಂದಿದೆ. ಮಕ್ಕಳ ಆರೋಗ್ಯದ ಬಗ್ಗೆ ಗಮನಕೊಡಬೇಕಾಗುತ್ತದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸಿಎಂ ಜೊತೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು.corona– people- meetings- ceremonies-  Minister -Dr. K. Sudhakar

ಜನರು ಸರ್ಕಾರದ ಸಲಹೆಯನ್ನು ಪಾಲಿಸದಿದ್ದರೆ, ಕೊರೊನಾ ಸಂಖ್ಯೆ ಹೆಚ್ಚಳವಾದರೆ, ಸರ್ಕಾರದಿಂದ ನಿಯಂತ್ರಣ ತರುವುದಕ್ಕೆ ಸಾಧ್ಯವಿಲ್ಲ. ಹಿರಿಯ ನಾಗರಿಕರಿಗೆ ಲಸಿಕೆ ಕೊಡಿಸಿ. ಜಾತ್ರೆ, ಪಾರ್ಟಿ, ಅನಗತ್ಯ ಚಟುವಟಿಕೆಗಳಿ ಕಡಿವಾಣ ಹಾಕಬೇಕು ಎಂದು ಹೇಳಿದ್ದಾರೆ.

key words : Corona-2nd Wave-Beginning-difficult-follow-advice-experts-Minister-Dr.K.Sudhakar-warns