ಹುಣಸೂರಿನಲ್ಲೂ ಕೊರೋನಾ ಭೀತಿ: ಮನೆ ಮನೆಗೆ ತೆರಳಿ ಜಾಗೃತಿ….

Promotion

ಮೈಸೂರು,ಮಾ,12,2020(www.justkannada.in): ಪ್ರಪಂಚದಾದ್ಯಂತ ಆತಂಕ ಸೃಷ್ಠಿಸಿರುವ ಕೊರೋನಾ ಭೀತಿ ಹುಣಸೂರಿನಲ್ಲೂ ಮನೆ ಮಾಡಿದೆ. ಹುಣಸೂರಿನ ಪಕ್ಷಿರಾಜಪುರದಲ್ಲಿ ಕೊರೋನಾ ಸೋಂಕಿನ ವದಂತಿ ಹಬ್ಬಿದೆ.

ಅಲೆಮಾರಿ ಸಮುದಾಯದವರು ವಾಸವಿರುವ ಗ್ರಾಮದಲ್ಲಿ  ಮಹಿಳೆಗೆ ಕರೊನಾ ವೈರಸ್ ಸೋಂಕು ಇದೆ ಎಂದು ವದಂತಿ ಹಬ್ಬಿದ್ದು ಈ ಹಿನ್ನೆಲೆ ಪಕ್ಷಿರಾಜಪುರಕ್ಕೆ ತಾಲೂಕು ಆರೋಗ್ಯಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿ  ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಇನ್ನು ಇಂದು ಅಥವಾ ನಾಳೆ 20ಕ್ಕೂ ಹೆಚ್ಚು ಜನರು ದಕ್ಷಿಣ ಆಫ್ರಿಕಾ, ದುಬೈನಿಂದ ಬರುವ ನಿರೀಕ್ಷೆ ಇದ್ದು  ಬೆಂಗಳೂರು ವಿಮಾನ ನಿಲ್ದಾಣದಲ್ಲೇ ತಪಾಸಣೆಗೆ ಮಾಡುವಂತೆ ಮೇಲಧಿಕಾರಿಗಳಿಗೆ ಡಿಎಚ್‌ಒ ವೆಂಕಟೇಶ್‌ ಮಾಹಿತಿ ನೀಡಿದ್ದಾರೆ.

Key words: Corona –virus-hunsur-mysore-Awareness – home.