ಕೊರೋನಾದಿಂದ ಇಡೀ ದೇಶವೇ ಒಂದಾಗಿದೆ: ಈ ಸಂದರ್ಭದಲ್ಲಿ ನಾವಿಬ್ಬರು ಒಂದಾಗಿರಲ್ವಾ.? – ಆರೋಗ್ಯ ಸಚಿವ ಶ್ರೀರಾಮುಲು…

Promotion

ಬೆಂಗಳೂರು,ಮಾ,16,2020(www.justkannada.in):  ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಮತ್ತು ತಮ್ಮ ನಡುವೆ ಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಶ್ರೀರಾಮುಲು ಕೊರೋನಾದಿಂದ ಇಡೀ ದೇಶವೇ ಒಂದಾಗಿದೆ: ಈ ಸಂದರ್ಭದಲ್ಲಿ ನಾವಿಬ್ಬರು ಒಂದಾಗಿರಲ್ವಾ.? ಎಂದು ಹೇಳಿದರು.

ಕೊರೋನಾ ವೈರಸ್ ಭೀತಿ ಕುರಿತು ಇಂದು ವಿಧಾನಪರಿಷತ್ ನಲ್ಲಿ ಚರ್ಚೆ ನಡೆಯಿತು. ಈ ವೇಳೆ ಮಾತನಾಡಿದ ಸಚಿವ ಶ್ರೀರಾಮುಲು, ಕೊರೋನಾದಿಂದ ಇಡೀ ದೇಶವೇ ಒಂದಾಗಿದೆ. ಎಲ್ಲರೂ ಒಟ್ಟಾಗಿ ಕೊರೋನಾ ವಿರುದ್ದ ಕೆಲಸ ಮಾಡುತ್ತಿದ್ದೇವೆ. ಈ ಸಂದರ್ಭದಲ್ಲಿ ನಾನು ಮತ್ತು ಸುಧಾಕರ್ ಒಂದಾಗಿರಲ್ವಾ ಎಂದು ಪ್ರಶ್ನಿಸಿದರು.

ನನ್ನ ಮತ್ತು ಸುಧಾಕರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕೊರೋನಾ ಭೀತಿ ಹಿನ್ನೆಲೆ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಎರಡು ಒಟ್ಟಿಗೆ ಕೆಲಸ ಮಾಡುತ್ತವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸಚಿವ ಶ್ರೀರಾಮುಲು ಸ್ಪಷ್ಟನೆ ನೀಡಿದರು.

Key words: Corona virus-  Health Minister –Sriramulu- legislative council