ಬಡಪಾಯಿ ಡಿ ಗ್ರೂಪ್ ನೌಕರರ ಮೇಲೆ ಪ್ರಯೋಗವೇಕೆ..? ಮೊದಲು ಸಚಿವರು ಶಾಸಕರು ಲಸಿಕೆ ಪಡೆಯಲಿ- ಯು.ಟಿ ಖಾದರ್…

Promotion

ಮಂಗಳೂರು,ಜನವರಿ,16,2021(www.justkannada.in): ಇಂದು ದೇಶಾದ್ಯಂತ ಕೊರೋನಾ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು ಈ ಮಧ್ಯೆ ಡಿ ಗ್ರೂಪ್ ನೌಕರರ ಮೇಲೆ ಕೊರೊನಾ ಲಸಿಕೆ ಪ್ರಯೋಗ ಮಾಡಿರುವುದಕ್ಕೆ ಮಾಜಿ ಸಚಿವ ಯು.ಟಿ. ಖಾದರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.jk-logo-justkannada-mysore

ಈ ಕುರಿತು ಮಾತನಾಡಿರುವ ಶಾಸಕ ಯು.ಟಿ ಖಾದರ್,  ಕೊರೊನಾ ಲಸಿಕೆ ಬಂದಿರುವುದು ಸಂತೋಷ. ಆದರೆ ಬಡಪಾಯಿ ಡಿ ಗ್ರೂಪ್ ನೌಕರರ ಮೇಲೆ ಕೊರೋನಾ ಲಸಿಕೆ ಪ್ರಯೋಗ ಮಾಡುತ್ತಿರುವುದು ಏಕೆ..? ಮೊದಲು ಮಂತ್ರಿಗಳು, ಶಾಸಕರು ಲಸಿಕೆಯನ್ನು ಹಾಕಿಸಿಕೊಳ್ಳಲಿ ಎಂದಿದ್ದಾರೆ.solve-teachers-problem-former-minister-ut-khader-govrnament

ಬೇರೆ ಸಂದರ್ಭದಲ್ಲಿ ಕಾರ್ಯಕ್ರಮ ಉದ್ಘಾಟನೆ ಮಾಡಲು ಆಡಂಬರದಿಂದ ಹೋಗುವ ಮಂತ್ರಿಗಳು, ಶಾಸಕರು ಮತ್ತು ಹಿರಿಯ ಅಧಿಕಾರಿಗಳು ಮೊದಲು ಲಸಿಕೆ ಪಡೆದು ಮಾದರಿಯಾಗಬೇಕು ಎಂದು ಮಾಜಿ ಸಚಿವ ಯುಟಿ ಖಾದರ್ ಸಲಹೆ ನೀಡಿದ್ದಾರೆ.

Key words: corona vaccine-Experiment -D-Group- employees –congress mla- UT khadar