ಕೊರೋನಾ ಲಸಿಕೆ ವಿಚಾರ: ರಾಜ್ಯಸರ್ಕಾರಗಳಿಗೆ ಮಹತ್ವದ ಸೂಚನೆ ನೀಡಿದ ಕೇಂದ್ರ ಸರ್ಕಾರ…

Promotion

ನವದೆಹಲಿ,ಅಕ್ಟೋಬರ್,23,2020(www.justkannada.in): ಕೊರೋನಾ ಲಸಿಕೆ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಮಹತ್ವದ ಸೂಚನೆ ನೀಡಿದೆ. ಕೊರೋನಾ ಲಸಿಕೆಯ ಖರೀದಿಗೆ ಪ್ರತ್ಯೇಕ ಯೋಜನೆ ಬೇಡವೆಂದು ರಾಜ್ಯಸರ್ಕಾರಗಳಿಗೆ ಕೇಂದ್ರ ಸರ್ಕಾರದಿಂದ ಸೂಚನೆ ನೀಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸರ್ಕಾರ, ಲಸಿಕೆ ಸಿಕ್ಕ ನಂತರ ಆದ್ಯತಾ ವಲಯಕ್ಕೆ ಉಚಿತವಾಗಿ ಕೇಂದ್ರ ಸರ್ಕಾರದಿಂದ ಲಸಿಕೆ ನೀಡಲು ಯೋಜನೆ ಸಿದ್ಧಪಡಿಸಲಾಗಿದೆ. ರಾಜ್ಯ, ಜಿಲ್ಲಾ ನೆಟ್ವರ್ಕ್ ಮೂಲಕ ಲಸಿಕೆ ನೀಡಲಾಗುವುದು  ಎಂದು ತಿಳಿಸಿದೆ.corona-vaccine-central-government-instruct-state-governments

ಆರಂಭಿಕ ಹಂತದಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡಲಾಗುವುದು. ನವೆಂಬರ್ ನಲ್ಲಿ ಆದ್ಯತಾ ವಲಯದ ಪಟ್ಟಿ ತಯಾರಿಸಲಾಗುವುದು. ಡಿಜಿಟಲ್ ಪ್ಲಾಟ್ ಫಾರಂ ಬಳಸಿ ಲಸಿಕೆ ನೀಡಲು ಸಿದ್ಧ  ಎಂದು ಕೇಂದ್ರ ಸರ್ಕಾರ ತಿಳಿಸಿದೆ ಎನ್ನಲಾಗಿದೆ.

Key words: Corona-vaccine-Central Government – instruct-State Governments.