ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗೆ ಸರ್ಕಾರದಿಂದ ದರ ನಿಗದಿ…

ಬೆಂಗಳೂರು,ಜೂ,19,2020(www.justkannada.in): ರಾಜ್ಯದಲ್ಲಿ ಕೊರೋನಾ ಅಬ್ಬರ ಹೆಚ್ಚಾಗುತ್ತಿದ್ದು ಈ ನಡುವೆ ಖಾಸಗಿ ಆಸ್ಪತ್ರೆಗಳಲ್ಲೂ ಕೊರೊನಾ ಸೋಂಕಿತರಿಗೆ ಚಿಕಿತ್ಸೆ  ನೀಡುವ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗೆ ರಾಜ್ಯ ಸರ್ಕಾರ ದರ ನಿಗದಿ ಮಾಡಿದೆ.  ಟಾಸ್ಕಫೋರ್ಸ್ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ದಿನಕ್ಕೆ ಜನರಲ್‌ ವಾರ್ಡ್‌ ಗೆ ಚಿಕಿತ್ಸಾ ವೆಚ್ಚ 5,200 ರೂ. ನಿಗದಿ ಮಾಡಲಾಗಿದ್ದು, ಐಸೋಲೇಶನ್‌ ವಾರ್ಡ್‌ ಗೆ ಪ್ರತಿ ದಿನಕ್ಕೆ 8,500 ರೂಪಾಯಿ  ದರ ನಿಗದಿಪಡಿಸಲಾಗಿದೆ.corona-treatment-private-hospitals-charge-government

ಹಾಗೆಯೇ   ಗಂಟಲು ದ್ರವ ಪರೀಕ್ಷೆಗೆ 2600 ರೂಪಾಯಿ, ಜನರಲ್‌ ವಾರ್ಡ್‌ ವಿತ್‌ ಆಕ್ಸಿಜನ್‌ ಗೆ 7,500 ರೂಪಾಯಿ, ಐಸಿಯು ವಿತ್‌ ವೆಂಟಿಲೇಟರ್‌ ಗೆ 12,000 ರೂ.ಅನ್ನ ಸರ್ಕಾರ  ನಿಗದಿಪಡಿಸಿದೆ. ಶೀಘ್ರದಲ್ಲೇ ಈ ಬಗ್ಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದೆ.

Key words: Corona -treatment – private hospitals – charge – government.