ಕೇರಳದಲ್ಲಿ ದೀಢೀರ್ ಏರಿಕೆ ಕಂಡ ಕೊರೋನಾ ಪಾಸಿಟಿವ್ ಕೇಸ್‌: ಬಾವಲಿ ಚೆಕ್ ಪೋಸ್ಟ್‌ ‌ನಲ್ಲಿ ತೀವ್ರ ಕಟ್ಟೆಚ್ಚರ.

ಮೈಸೂರು,ಜುಲೈ,30,2021(www.justkannada.in): ಕೇರಳದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ದೀಢೀರ್ ಏರಿಕೆ ಕಂಡಿದ್ದು ಇದೀಗ ಮೈಸೂರಿಗೆ ಮತ್ತೆ ಆತಂಕ ಶುರುವಾಗಿದೆ.

ಕೇರಳದಲ್ಲಿ ಬರೋಬ್ಬರಿ ಎರಡು ದಿನದಿಂದ ಕೊರೋನಾ ಕೇಸ್‌ ಗಳು 20 ಸಾವಿರ ಗಡಿ ದಾಡಿದ್ದು, ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಎಚ್ ಡಿ ಕೋಟೆಯ ಗಡಿ ಭಾಗದ ಬಾವಲಿ ಚೆಕ್ ಪೋಸ್ಟ್‌‌ನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಹೆಚ್.ಡಿ ಕೋಟೆ ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್ ನೇತೃತ್ವದಲ್ಲಿ ತಪಾಸಣೆ ಕಾರ್ಯ ನಡೆಯಿತು.

ಈ ಕುರಿತು ಮಾತನಾಡಿರುವ ರವಿಕುಮಾರ್, ಯಾವುದೇ ಆತಂಕ ಬೇಡ. ರಾಜ್ಯಕ್ಕೆ ಎರಡು ಡೋಸ್ ವಾಕ್ಸಿನ್ ಆದವರಿಗೆ ಮಾತ್ರ ಎಂಟ್ರಿ‌ ನೀಡಲಾಗುತ್ತಿದೆ. ಜೊತೆಗೆ RTPCR ವರದಿ ನೆಗೆಟಿವ್ ಇದ್ದವರಿಗೆ ಮಾತ್ರ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಪ್ರತಿದಿನ ಸಂಜೆ 6ರವರೆಗೂ ವಾಹನಗಳ ಸಂಖ್ಯೆ ಸಮೂದು. ಎಲ್ಲ ವಾಹನಗಳನ್ನ ತಪಾಸಣೆ ಮಾಡಿ ಬಿಡಲಾಗುತ್ತೆ. ಸರ್ಕಾರ ಹಾಗೂ ಜಿಲ್ಲಾಡಳಿತದ ಸೂಚನೆಯಂತೆಯೇ ಕ್ರಮ ಕೈಗೊಳ್ಙಳಲಾಗುತ್ತಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ.

ಸಂಶಯ ಬಂದರೆ ಸ್ಥಳದಲ್ಲೇ ಕರೋನಾ ತಪಾಸಣೆ ಮಾಡಿಸುತ್ತೇವೆ. ಈ ಬಾರಿ ಗಡಿಭಾಗದಲ್ಲಿ ಹಿಂದಿಗಿಂತ ಹೆಚ್ಚಿನ ಕ್ರಮ ಕೈಗೊಂಡಿದ್ದೇವೆ. ಯಾವುದೇ ಆತಂಕ ಬೇಡ ಎಂದು ಆರೋಗ್ಯಾಧಿಕಾರಿ ರವಿಕುಮಾರ್ ತಿಳಿಸಿದ್ದಾರೆ.

Key words: Corona Positive- Case – Kerala-mysore- bavali check post