ಕೊರೋನಾ ಭೀತಿ ಹಿನ್ನೆಲೆ: ಮೈಸೂರಿನಿಂದ ಸದ್ಯಕ್ಕಿಲ್ಲ ನೇರ ಅಂತರಾಜ್ಯ ಬಸ್ ಪ್ರಯಾಣ…

Promotion

ಮೈಸೂರು,ಜೂ,20,2020(www.justkannada.in): ರಾಜ್ಯದಲ್ಲಿ ಲಾಕ್ ಡೌನ್ ಸಡಿಲ ಬಳಿಕ ಅಂತರಾಜ್ಯ ಬಸ್ ಸಂಚಾರ ಆರಂಭವಾಗಿದ್ದರೂ ಮೈಸೂರಿಗರಿಗೆ ಮಾತ್ರ ನೇರ ಅಂತರಾಜ್ಯ ಬಸ್ ಪ್ರಯಾಣ ಭಾಗ್ಯವಿಲ್ಲ.

ಹೌದು ಕೊರೋನಾ ವೈರಸ್ ಭೀತಿ ಹಿನ್ನೆಲೆ ಮೂರು ದಿನ ಕಳೆದರೂ ಮೈಸೂರಿಗರಿಗೆ ನೇರ ಅಂತರಾಜ್ಯ ಬಸ್ ಪ್ರಯಾಣವಿಲ್ಲ. ಕಳೆದ ಮೂರು ದಿನಗಳ ಹಿಂದೆಯಷ್ಟೇ ಅಂತರಾಜ್ಯ ಬಸ್ ಸೇವೆ ಪ್ರಾರಂಭವಾಗಿದೆ. ಅಂತರಾಜ್ಯ ಬಸ್ ಸೇವೆ ಪುನರಾರಂಭ ಹಿನ್ನೆಲೆ ಕೇವಲ ಆಂಧ್ರಪ್ರದೇಶ ರಾಜ್ಯಕ್ಕಷ್ಟೇ ಬಸ್ ಗಳ ಕಾರ್ಯಾಚರಣೆಗೆ ಸರ್ಕಾರ ಅನುಮತಿ ನೀಡಿದೆ.Corona -no direct- interstate- bus- journey - Mysore.

ಆದರೆ ಮೈಸೂರಿನಿಂದ ಸದ್ಯಕ್ಕೆ ನೇರ ಅಂತರಾಜ್ಯ ಬಸ್ ಪ್ರಯಾಣ ಇಲ್ಲ. ಮೈಸೂರಿನಿಂದ ತಿರುಪತಿ ಸೇರಿದಂತೆ ಹಲವು ನಗರಗಳಿಗೆ ನೇರ ಬಸ್ ಸೇವೆ ಒದಗಿಸದಿರಲು ತೀರ್ಮಾನಿಸಲಾಗಿದೆ. ಹೀಗಾಗಿ  ಮೈಸೂರಿನ ಪ್ರಯಾಣಿಕರು ಬೆಂಗಳೂರಿಗೆ ತೆರಳಿ ಅಲ್ಲಿಂದ ಬೇರೊಂದು ಬಸ್ ನಲ್ಲಿ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.

Key words: Corona -no direct- interstate- bus- journey – Mysore.