ಕರೋನಾ, ಹಕ್ಕಿಜ್ವರ ಭೀತಿ ಜತೆ ಇದೀಗ ಬಿಸಿಲಿನ ಹೊಡೆತಕ್ಕೆ ಮೈಸೂರಿಗರು ತತ್ತರ…..

Promotion

ಮೈಸೂರು,ಮಾ,17,2020(www.justkannada.in):  ಒಂದೆಡೆ ಮಹಾಮಾರಿ ಕರೋನಾ ವೈರಸ್ ಆತಂಕ, ಇನ್ನೊಂದೆಡೆ ಹಕ್ಕಿಜ್ವರದ ಭೀತಿಯ ಜತೆ ಇದೀಗ ಮೈಸೂರಿಗರು ಬಿಸಿಲಿನ ತಾಪಕ್ಕೆ ತತ್ತರಿಸಿದ್ದಾರೆ.

ಹೌದು, ಕೊರೋನಾ ಹಕ್ಕಿಜ್ವರದ ಆತಂಕದಲ್ಲಿರುವ ಮೈಸೂರಿನ ಜನತೆ ಇದೀಗ ಬಿಸಿಲಿನ ಹೊಡೆತಕ್ಕೆ ಸಿಲುಕಿ ಹೈರಾಣಾಗಿದ್ದಾರೆ.  ಬಿಸಿಲಿನ ತಾಪ ಹೆಚ್ಚಾದ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರು ಕಾದ ಬಾಣಲಿಯಂತಾಗಿದೆ. ದಿನೇ ದಿನೇ ತಾಪಮಾನ ಏರಿಕೆಯಾಗುತ್ತಿದ್ದು, ಮಾರ್ಚ್ 1ಕ್ಕೆ 31 ಡಿಗ್ರಿ ಯಷ್ಟಿದ್ದ ತಾಪಮಾನ ತಿಂಗಳಾಂತ್ಯಕ್ಕೆ 37 ಡಿಗ್ರಿ ಸೆಲ್ಸಿಯಸ್ ದಾಟುವ ಸಾಧ್ಯತೆ ಇದೆ.

ಮುಂದಿನ ಏಪ್ರಿಲ್, ಮೇ ವೇಳೆಗೆ  ಬಿಸಿಲಿನ ತಾಪ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಹೀಗೆ ದಿನೇ ದಿನೇ ಏರಿಕೆಯಾಗುತ್ತಿರುವ ತಾಪಮಾನಕ್ಕೆ ಜನರು ಬಳಲುತ್ತಿದ್ದಾರೆ. ಇನ್ನು ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳು ಬೇಗ ಹರಡುವ ಹಿನ್ನೆಲೆ, ನಾಗರೀಕರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು ಅತ್ಯವಶ್ಯವಾಗಿದೆ.

Key words: Corona-  Mysore- throes – sunny -storm