82 ವರ್ಷದ ಅಪ್ಪನಿಗೆ ಶೇವಿಂಗ್ ಮಾಡಿದ ಮಗಳು, ಕಾರಣ ಏನ್ ಗೊತ್ತ..?

 

ಮೈಸೂರು, ಮಾ.27, 2020 : (www.justkannada.in news ) ಕೆಲವೊಮ್ಮೆ ಪರಿಸ್ಥಿತಿಗಳು ಹೊಸ ಕೆಲಸಗಳನ್ನು ಮಾಡಿಸಿ ಆತ್ಮವಿಶ್ವಾಸ ಹೆಚ್ಚಿಸುತ್ತವೆ. ಕರೋನ ವೈರಸ್ಸಿನಿಂದ ಈಗ ಆಗುತ್ತಿರುವ ಅನಾಹುತಗಳ ಜತೆಗೆ ಆಶಾಭಾವನೆ ಮೂಡಿಸುವ ಕಾರ್ಯಗಳು ಸಹ ನಡೆಯುತ್ತಿರುವುದು ವಿಶೇಷ.

‘ ಫೇಸ್ ಬುಕ್ ‘ ನ ಮುಖಪಟ್ಟದಲ್ಲಿನ ಫೋಟೋ ಬರಹ ಒಂದು ಆಶ್ಚರ್ಯದ ಜತೆಗೆ ನಿಜಕ್ಕೂ ಕುತೂಹಲಕಾರಿಯಾಗಿತ್ತು. ಈ ಕಾರಣಕ್ಕೆ ಅದನ್ನಿಲ್ಲಿ ಹಂಚಿಕೊಳ್ಳಲಾಗುತ್ತಿದೆ..

corona-mysore-shaving-karnataka

ನನ್ನ ತಂದೆಗೆ ಎಂಭತ್ತೆರಡು ವರ್ಷ. ನಡೆಯಲು, ಕೂರಲು ನಿಲ್ಲಲು ಎಲ್ಲದಕ್ಕೂ ಆಧಾರ ಬೇಕು. ಅವರಿಗೆ ತನ್ನ ಶೇವಿಂಗ್ ಮಾಡಿಕೊಳ್ಳುವುದು ಸಾಧ್ಯವಾಗುತ್ತಾ ಇಲ್ಲ ಅನ್ನುವ ಕಾರಣಕ್ಕೆ ಮನೆಗೆ ಶೇವಿಂಗ್ ಮಾಡುವವರನ್ನು ಕರೆಸಿಕೊಳ್ಳುತ್ತೇವೆ. ಲಾಕ್ ಡೌನಿಗೂ ಮುಂಚೆ ಬರುತ್ತೇನೆ ಅಂತ ವಾಗ್ದಾನ ಕೊಟ್ಟಿದ್ದ ಸಲೂನ್ ಮನುಷ್ಯ ಆಮೇಲೆ ಬರುವುದಿಲ್ಲ ಅಂತ ಹೇಳಿದ. ಊರಿನವರು ಅವನಿಗೆ ಹೋಗಬೇಡ ಅಂತ ಹೇಳಿರಬೇಕು ಅಂದುಕೊಂಡೆ. ಯಾಕೆಂದರೆ ನಮ್ಮ ಏರಿಯಾದಲ್ಲಿ ನಾನಾ ಕಾರಣಕ್ಕೆ ಎರಡು ಮೂರು ಕುಟುಂಬಗಳು ಕ್ವಾರಂಟೈನ್ನಲ್ಲಿ ಇವೆ. ಅವನ ಜೀವ ಆತಂಕ ಎಲ್ಲವೂ ಅವನ ಪ್ರಕಾರ ಸರಿಯೇ ತಾನೇ!

ಹಾಗಾಗಿ ಇಂದು ಬೆಳಿಗ್ಗೆ ಅಪ್ಪನ ಶೇವಿಂಗ್ ಮಾಡಿಯೇ ತೀರುತ್ತೇವೆ ಅಂತ ನಿರ್ಧಾರ ಮಾಡಿ ಮಾಡಿಯೇ ಬಿಟ್ಟೆ! ಹೊಸ ಕೆಲಸ ಕಲಿತಿದ್ದಕ್ಕೆ ಖುಷಿ ಆಯಿತು! ನನ್ನ ಗಂಡ ಮೊದಮೊದಲಿಗೆ ಅನುಮಾನ ಪಟ್ಟರೂ ಕೆಲಸ ಮುಗಿದ ಮೇಲೆ very good ಅನ್ನುವ ಸರ್ಟಿಫಿಕೇಟ್ ಕೊಟ್ಟರು. ನಿನ್ನ ಶೇವಿಂಗ್ ಕೂಡ ನಾನೇ ಮಾಡಿಕೊಡಲ ಅಂತ ಕೇಳಿದ್ದಕ್ಕೆ ಕೈ ಮುಗಿದು ಗೌರವ ಸಲ್ಲಿಸಿದರು.

(ಕೃಪೆ : ಪ್ರೀತಿನಾಗರಾಜ್/ ಫೇಸ್ ಬುಕ್)

key words : corona-mysore-shaving-karnataka