ಕೊರೊನಾ ಮೀಟರ್: ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಹೆಚ್ಚಳ

Promotion

ಬೆಂಗಳೂರು, ಡಿಸೆಂಬರ್ 17, 2021 (www.justkannada.in): ಒಮಿಕ್ರಾನ್ ವೈರಸ್ ಭೀತಿಯ ನಡುವೆಯೂ ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ  ಹೆಚ್ಚಿದೆ.

ದೇಶಾದ್ಯಂತ ಇಂದು 7,447 ಜನರಿಗೆ ಕೋವಿಡ್ ದೃಢಪಟ್ಟಿದೆ. ಅಲ್ಲದೇ ಸೋಂಕಿನಿಂದಾಗಿ 391 ಜನರು ಸಾವನ್ನಪ್ಪಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಹೊಸದಾಗಿ 7,447 ಜನರಿಗೆ ಸೋಂಕು ದೃಢಪಟ್ಟಿದೆ.

ದೇಶದಲ್ಲಿ 86,415 ಸಕ್ರೀಯ ಸೋಂಕಿತರು ಇದ್ದಾರೆ. ಇದುವರೆಗೆ 3,41,62,765 ಗುಣಮುಖರಾಗಿದ್ದಾರೆ.

ಇಂದು 391 ಸೋಂಕಿತರು ಸಾವನ್ನಪ್ಪಿದ ಕಾರಣ, ಸಾವಿನ ಸಂಖಅಯೆ 4,76,869ಕ್ಕೆ ಏರಿಕೆಯಾಗಿದೆ. ಇದುವರೆಗೆ 1,35,99,96,267 ಜನರಿಗೆ ಲಸಿಕೆ ನೀಡಲಾಗಿದೆ