ಈಗಾಗಲೇ ಘೋಷಣೆಯಾಗಿರುವ ಚುನಾವಣೆ ನಡೆಯುತ್ತೆ- ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ…

Promotion

ಬೆಂಗಳೂರು,ಏಪ್ರಿಲ್,26,2021(www.justkannada.in):  ರಾಜ್ಯದಲ್ಲಿ ಹೆಚ್ಚಳವಾಗಿರುವ ಕೊರೋನಾ ಸೋಂಕು ತಡೆಯಲು ರಾಜ್ಯದಲ್ಲಿ ನಾಳೆಯಿಂದ 14 ದಿನಗಳ ಕಾಲ ಜನತಾ ಕರ್ಫ್ಯೂ ಘೋಷಣೆ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ ನಡೆಯಬೇಕಿರುವ ಚುನಾವಣೆ ಮುಂದೂಡಿಕೆ ಬಗ್ಗೆ ಗೃಹ ಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.jk

ಈ ಕುರಿತು ಇಂದು ವಿಧಾನಸೌಧದಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಈಗಾಗಲೇ ಘೋಷಣೆಯಾಗಿರುವ ಚುನಾವಣೆ ನಡೆಯುತ್ತದೆ. ಬಳ್ಳಾರಿ ಮತ್ತು ರಾಮನಗರ ನಗರಸಭೆ ಚುನಾವಣೆಗಳು ನಡೆಯುತ್ತದೆ. ನಂತರದ ಚುನಾವಣೆಗಳನ್ನ ಮುಂದೂಡಿಕೆ ಮಾಡಲಾಗುತ್ತದೆ. ಮುಂದೂಡಲು ಚುನಾವಣಾ ಆಯೋಗಕ್ಕೆ ಸರ್ಕಾರ ಶಿಫಾರಸ್ಸು ಮಾಡಿದೆ ಎಂದು ತಿಳಿಸಿದರು.corona-lockdown- election- already –announced- Home Minister- Basavaraja Bommai

ಕೋವಿಡ್ ನಿಯಂತ್ರಣಕ್ಕಾಗಿ ಇಂದು ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ನಾಳೆ ರಾತ್ರಿ 9 ರಿಂದ 14 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿ ಮಾಡಲಾಗಿದೆ. ಇದರಿಂದಾಗಿ ನಾಳೆ ಸಂಜೆ 9 ರಿಂದ 14 ದಿನಗಳ ಕಾಲ ಸಾರಿಗೆ ಸಂಚಾರ ಸೇರಿ ಎಲ್ಲವೂ ಬಂದ್ ಆಗಲಿದೆ. ಕೃಷಿ, ಉತ್ಪಾದನಾ ವಲಯಕ್ಕೆ ವಿನಾಯಿತಿ ನೀಡಲಾಗಿದೆ.

Key words: corona-lockdown- election- already –announced- Home Minister- Basavaraja Bommai