ನಾಳೆ ಯಾರಾದ್ರು ಹೊರಗೆ ಬಂದ್ರೆ ಒಳಗೆ ಕಳಿಸ್ತೇವೆ ಎಂದು ಎಚ್ಚರಿಕೆ ಕೊಟ್ಟ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್…

ಬೆಂಗಳೂರು,ಮಾ,21,2020(www.justkannada.in):  ಕೊರೋನಾ ವೈರಸ್ ಹರಡದಂತೆ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ನಾಳೆ ಬೆಳಿಗ್ಗೆ 7 ರಿಂದ ರಾತ್ರಿ 9ರವರೆಗೆ ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆ ನಾಳೆ ಎಲ್ಲರೂ ಮನೆಯಲ್ಲೇ ಇರಿ ಯಾರೂ ಹೊರಗೆ ಬರಬೇಡಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಈ ಬಗ್ಗೆ ಇಂದು ಮಾತನಾಡಿದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ನಾಳೆ ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂಗೆ ಕರೆ ನೀಡಿರುವ ಹಿನ್ನೆಲೆ, ನಾಳೆ ಎಲ್ಲರೂ ಮನೆಯಲ್ಲೇ ಇರಿ. ಯಾರೂ ಹೊರಗೆ ಬರಬೇಡಿ.  ಹೊರಗಡೆ ಬಂದರೆ ಬಲವಂತವಾಗಿ ಒಳಗೆ ಕಳುಹಿಸುತ್ತೇವೆ.  ಕರ್ನಾಟಕ ಪೊಲೀಸ್ ಕಾಯ್ದೆ31(L) ಅಡಿ ಒಳಗೆ ಕಳುಹಿಸುತ್ತೆವೆ. ಹೊರಗೆ ಬಂದರೇ ಮನೆಗೆ ಕಳುಹಿಸುವ ಅಧಿಕಾರ ನಮಗೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಾಳೆ ಯಾರಾದ್ರೂ ಸುಮ್ಮನೆ ರಸ್ತೆ ಮೇಲೆ ತಿರುಗಾಡಿದ್ರೆ act 31(L) ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತೆ. ಮಾರ್ಚ್ 22ರ ಭಾನುವಾರದಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ದೇಶದ ಪ್ರತಿಯೊಬ್ಬರು ಜನತಾ ಕರ್ಫ್ಯೂ ಪಾಲಿಸಬೇಕು. ಈ ಸಮಯದಲ್ಲಿ ಯಾರೊಬ್ಬರೂ ಕೂಡ ತಮ್ಮ ಮನೆಯಿಂದ ಹೊರಗೆ ಬರಬಾರದು. ಈ ಕುರಿತು ಎಲ್ಲಾ ಡಿಸಿಪಿಗಳಿಗೆ ಈಗಾಗ್ಲೇ ಸಭೆ ನಡೆಸಿ ಸೂಚನೆ‌ ನೀಡಿದ್ದೇನೆ. ಇನ್ನೂ ಪೊಲೀಸ್ ಇಲಾಖೆ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಜೊತೆ ಮಾತುಕತೆ ನಡೆಸಿದ್ದೇವೆ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.

ಇನ್ನು ಕೊರೋನಾ ವೈರಸ್ ಬಂದ್ಮೆಲೆ ಗಂಡ ಹೆಂಡತಿ ಜಗಳ ಹೆಚ್ಚಾಗಿದೆ.   ಜಗಳ ಆತ್ಮಹತ್ಯೆ ಕೇಸ್ ಹೆಚ್ಚಾಗಿವೆ.  ಕೊಲೆ ಸುಲಿಗೆ ಪ್ರಕರಣ ಕಡಿಮೆಯಾಗಿವೆ ಎಂದು ಭಾಸ್ಕರ್ ರಾವ್ ಹೇಳಿದರು.

Key words: corona- janatha curfew-bangalore- people-police Commissioner-Bhaskar rao