ವ್ಯಕ್ತಿಗೆ ಕೊರೋನಾ ಸೋಂಕು ಹಿನ್ನೆಲೆ: ಕೊಡಗು ಜಿಲ್ಲೆಯಲ್ಲಿ  ರೆಸಾರ್ಟ್, ಹೋಟೆಲ್, ಹೋಮ್ ಸ್ಟೇ ಸೇರಿ ಎಲ್ಲಾ ಬಂದ್….

ಕೊಡಗು,ಮಾ,19,2020(www.justkannada.in): ಕೊಡಗಿನಲ್ಲಿ 35 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆ  ಕೊಡಗಿನಲ್ಲಿ ರೆಸಾರ್ಟ್, ಹೋಟೆಲ್, ಹೋಮ್ ಸ್ಟೇ ಸೇರಿ ಎಲ್ಲಾ ಬಂದ್ ಮಾಡಿ ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಆದೇಶಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್,  ದುಬೈನಿಂದ ಬಂದ ವ್ಯಕ್ತಿ ಮಡಿಕೇರಿ ತಾಲೂಕಿನ ಕೊಂಡಂಗೇರಿ ಗ್ರಾಮದವರು. ಮೈಸೂರಿನಿಂದ ಇದೀಗ ಬಂದ ರಿಪೋರ್ಟ್ ಪಾಸಿಟಿವ್ ಇದೆ. ಕೊರೋನಾ ಎದುರಿಸಲು ಮತ್ತು ತಡೆಗೆ, ಜಾಗೃತಿ ಮೂಡಿಸಲು ಜಿಲ್ಲಾಡಳಿತ ಸಿದ್ಧವಾಗಿದೆ. 100 ಬೆಡ್ ಐಸೊಲೇಟೆಡ್ ವಾರ್ಡ್, ಕೋರೆಂಟಲ್ 150 ಬೆಡ್ ಮತ್ತೊಂದು ವಾರ್ಡ್ ರೆಡಿ ಮಾಡಲಾಗಿದೆ. ಕೊಡಗು ಮೆಡಿಕಲ್ ಕಾಲೇಜಿನಲ್ಲಿ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪಾಸಿಟಿವ್ ಬಂದ ವ್ಯಕ್ತಿಯ ಆರೋಗ್ಯ ಸದ್ಯಕ್ಕೆ ಸ್ಟೇಬಲ್ ಇದೆ. ಮುಂಗಾಗ್ರತಾ ದೃಷ್ಠಿಯಿಂದ ಜಿಲ್ಲೆಯಲ್ಲಿ 144/3 ಸೆಕ್ಷನ್ ಕೂಡ ಜಾರಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಹಾಗೆಯೇ ರೆಸಾರ್ಟ್, ಹೊಟೆಲ್, ಹೋಮ್ಸ್ ಸ್ಟೇ ಬುಕಿಂಗ್ ಕ್ಯಾನ್ಸಲ್ ಮಾಡಿ, ಹೊಸ ಬುಕಿಂಗ್ ತಗೊಬೇಡಿ ಎಂದು ಸೂಚನೆ ನೀಡಿರುವ ಡಿಸಿ ಅನೀಸ್ ಕಣ್ಮಣಿ ಜಾಯ್, ಕರೋನ ತಡೆಗೆ ಜಿಲ್ಲಾ ಮಟ್ಟದ ವಿಶೇಷ ತಂಡ ರಚನೆ ಮಾಡಲಾಗಿದೆ. ಧಾರ್ಮಿಕ ಕಾರ್ಯಕ್ರಮ ರುಟೀನ್ ಬಿಟ್ಟು ಬೇರೆ  ಯಾವುದೇ ಕಾರ್ಯಕ್ರಮ ಮಾಡುವ ಆಗಿಲ್ಲ.  ಇಂದು ಅಥವಾ ನಾಳೆ ಜಿಲ್ಲೆಯ ಎಲ್ಲಾ ಧಾರ್ಮಿಕ ಮುಖಂಡರ ಸಭೆ  ಮಾಡಲಾಗುತ್ತದೆ ಎಂದು ತಿಳಿಸಿದರು.

ಇನ್ನು ಶಾಲೆ ಕಾಲೇಜು ಅಂಗನವಾಡಿ, ಜಿಮ್, ಸ್ವಿಮ್ಮಿಂಗ್ ಪೂಲ್, ಮೈದಾನ, ಟ್ಯೂಷನ್ ಸೆಂಟರ್,  ಸಂತೆ, ಜಾತ್ರೆ ಸೇರಿದಂತೆ ಜನ ಸೇರುವಂತಹ ಎಲ್ಲಾ ಕಾರ್ಯಕ್ರಮಗಳನ್ನ ಕಂಪ್ಲೀಟ್ ಬಂದ್ ಮಾಡಲಾಗಿದೆ. ಜಿಲ್ಲೆಯ ಗಡಿಗಳಲ್ಲಿ ಚೆಕ್ ಫೊಸ್ಟ್ ತೆರೆದು ಪರಿಶೀಲನೆ ಮಾಡಲಾಗುತ್ತಿದೆ. ಮೆಡಿಕಲ್, ದಿನಸಿ ತರಕಾರಿ ಬಿಟ್ಟು ಬೇರೆ ಎಲ್ಲವನ್ನೂ ಕ್ಲೋಸ್ ಮಾಡಿ ಸಹಕರಿಸಿ. ಪ್ರೈವೇಟ್ ಕಂಪೆನಿ ವರ್ಕ್ ಫ್ರಮ್ ಹೋಮ್ ಡಿಕ್ಲೇರ್ ಮಾಡಬೇಕು. ಸರ್ಕಾರಿ ಕಛೇರಿ ಕಾರ್ಯ ನಿರ್ವಹಿಸುತ್ತದೆ ರಜೆ ಇರುವುದಿಲ್ಲ. ಪ್ರಗ್ನೆಂಟ್ ಮತ್ತು ಆರೋಗ್ಯ ಸಮಸ್ಯೆ ಇರುವ ಸರ್ಕಾರಿ ಅಧಿಕಾರಿಗಳಿಗೆ ವಿನಾಯಿತಿ ಇರುತ್ತದೆ ಎಂದು ಕೊಡಗು ಡಿಸಿ ಅನೀಸ್ ಕಣ್ಮನಿ ಜಾಯ್ ಮಾಹಿತಿ ನೀಡಿದರು.

Key words: Corona- infection –kodagu-hotels-resorts-home stay-bandh