ಕೊರೊನಾ ಸೋಂಕು ಹೆಚ್ಚಳ: ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿ ಮುಂದೂಡಿಕೆ

Promotion

ಬೆಂಗಳೂರು, ಏಪ್ರಿಲ್ 06, 2021 (www.justkannada.in): ಫ್ರೆಂಚ್ ಓಪನ್ ಟೆನ್ನಿಸ್‌ ಟೂರ್ನಿ ಮುಂದೂಡಿಕೆ ಸಾಧ್ಯತೆ ಇದೆ.

ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಪರಿಣಾಮ ಟೂರ್ನಿಯನ್ನು ಮುಂದೂಡುವ ಚಿಂತನೆ ಇದೆ ಎಂದು ಫ್ರಾನ್ಸ್​​ ​ ಕ್ರೀಡಾ ಸಚಿವ ರೊಕ್ಸಾನಾ ಮರಸಿನಾನು ತಿಳಿಸಿದ್ದಾರೆ.

ಫ್ರಾನ್ಸ್ ದೇಶದಲ್ಲಿ ಶನಿವಾರದಿಂದ ರಾಷ್ಟ್ರವ್ಯಾಪಿ ಮೂರನೇ ಹಂತದ ಲಾಕ್‌ಡೌನ್ ಘೋಷಣೆಯಾಗಿದ್ದು, ಮೇ ವೇಳೆಗೆ ಕೊನೆಗೊಳ್ಳುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.

ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಫ್ರೆಂಚ್ ಓಪನ್ ಟೂರ್ನಿ ಸೇರಿದಂತೆ ಎಲ್ಲಾ ಕ್ರೀಡೆಗಳು ಮತ್ತು ಪ್ರಮುಖ ಸಮಾರಂಭಗಳನ್ನು ಮುಂದೂಡಲಾಗುತ್ತಿದೆ ಎಂದು ಮರಸಿನಾನು ತಿಳಿಸಿದ್ದಾರೆ.